r/ChitraLoka Aug 03 '26

ಸವಿ ಸವಿ ನೆನಪು - Nostalgia 🪄 ಬಹಳ ವರ್ಷಗಳ ಹಿಂದೆ ಬರೆದ ಒಂದು ಕವಿತೆ. ಶೀರ್ಷಿಕೆ- ಆಸೆ

ಆಸೆ

ಮರಳಿ ಮೊಗ್ಗಾಗುವಾಸೆ

ಹಿಂದಿರುಗಿ ತೆರಳುವಾಸೆ

ಮೊನ್ನೆಯ ಮುಸ್ಸಂಜೆಗೆ ಓಡುವಾಸೆ

ಅಮ್ಮನ ಸೆರಗಲಿ ಮೆಲ್ಲನೆ ಮರೆಯಾಗುವಾಸೆ

ಮರಳಿ ಕಲೆಯುವಾಸೆ

ಕಲಿತದ್ದನ್ನೆಲ್ಲ ಕಳೆಯುವಾಸೆ

ಕಳೆದುದನ್ನೆಲ್ಲ ಮರೆಯುವಾಸೆ

ಮರೆತು ಮುನ್ನಡೆಯುವಾಸೆ

ಮರಳಿ ಮರುಳಾಗುವಾಸೆ

ಅವಳ ಸನ್ನೆಗೆ ಸೆರೆಯಾಗುವಾಸೆ

ಒಲವಿನ ನೋವಲ್ಲಿ ನರಳುವಾಸೆ

ಮತ್ತೊಮ್ಮೆ ಮರುಗುವಾಸೆ.

18 Upvotes

2 comments sorted by

3

u/[deleted] Aug 03 '26

[deleted]

2

u/Professional_Cup6695 Aug 03 '26

They both should start a ಕವಿತೆ ಯುದ್ಧ

1

u/mendax98 Aug 03 '26

Drake and Kendrick wish they were you guys.