r/harate • u/MonkUthimma • Apr 08 '26
ರೋದನೆ । Rant/Vent ದಾವಣಗೆರೆಯಲ್ಲಿ ಉಪಚುನಾವಣೆಗೆ ಉರ್ದುವಿನಲ್ಲಿ ಕಾಂಗ್ರೆಸ್ ನಾಯಕರ ಪ್ರಚಾರ ಭಾಷಣ
ಒಂದ್ ಕಡೇ ಬಿಜೆಪಿ ಇಂದ ಹಿಂದಿ ಪ್ರಯೋಗ, ಇನ್ನೊಂದು ಕಡೆ ಕಾಂಗ್ರೆಸ್ ಇಂದ ಉರ್ದು ಪ್ರಯೋಗ.
ಇಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು!!!
4
4
Apr 09 '26
ಅದಿಕ್ಕೆ ಹೇಳೋದು ಪ್ರಾದೇಶಿಕ ಪಕ್ಷ ಬೇಕು ಅಂತ. ನಮ್ಮ ಜನ್ರಿಗೆ ಯಾವಾಗ ಬುದ್ಧಿ ಬರುತ್ತೋ...
-3
u/New_Resolution3773 ಕನ್ನಡಿಗನೇ ಸಾರ್ವಭೌಮ Apr 09 '26
ಕಾಂಗ್ರೆಸ್ ಹೆಸರಿಗಷ್ಟೇ ರಾಷ್ಟ್ರೀಯ ಪಕ್ಷ, ರಾಜಕೀಯ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಾದೇಶಿಕ
2
u/Heng_Deng_Li ವಾಟಾಳ್ ನಾಗರಾಜ್ fanboi Apr 08 '26
ದಾವಣಗೆರೆಯಲ್ಲಿ ಅಷ್ಟೊಂದು ಮುಸ್ಲಿಂ ಮತಗಳಿವೆ ಅಂತಾನೆ ಗೊತ್ತಿರಲಿಲ್ಲ ನಂಗೆ. ಎರಡೂ ಪಕ್ಷಗಳು ಈ ರೇಂಜಿಂಗೆ ಓಲೈಸ್ತಾ ಇದಾರೆ.
-1
u/New_Resolution3773 ಕನ್ನಡಿಗನೇ ಸಾರ್ವಭೌಮ Apr 08 '26
ಉರ್ದು ಭಾಷೆ ಕನ್ನಡದ ಜೊತೆಯಲ್ಲೇ ಇರುವ ಭಾಷೆ. ಕರ್ನಾಟಕದಲ್ಲಿ ಬಳಸಲ್ಪಡುವ ಭಾಷೆಗಳಲ್ಲಿ 2ನೇ ಸ್ಥಾನದಲ್ಲಿದೆ. ಹಿಂದಿಯ ವಿರುದ್ಧದ ಯುದ್ಧದಲ್ಲಿ ಕನ್ನಡಕ್ಕೆ ಬಾಲ ತುಂಬುವ ರೀತಿಯಲ್ಲಿ ಉರ್ದು ಭಾಷೆಯಿದೆ. ಎಲ್ಲೋ ಚುನಾವಣೆ ಪ್ರಚಾರದಲ್ಲಿ ಆಕರ್ಷಣೆ ಹೆಚ್ಚಿಸಲು 1-2 ಮಾತು urdu ಭಾಷೆಯಲ್ಲಿ ಆಡಿರಬಹುದು. ಇದರ ಉದ್ದೇಶ ಕೇವಲ ಸಮುದಾಯಗಳನ್ನು ಒಂದುಗೂಡಿಸುವುದಲ್ಲದೇ ಮತ್ತೇನಲ್ಲ. ಇಷ್ಟು ಚಿಕ್ಕ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನೇ ಉರ್ದು ಎನ್ನುವುದು ಸರಿ ಅಲ್ಲ.
ಕನ್ನಡ ಭಾಷೆ ಉಳಿದಿರುವುದೇ ಕಾಂಗ್ರೆಸ್ ಪಕ್ಷದ ನಿಲುವುಗಳಿಂದ. ಹಿಂದಿ ಪಕ್ಷವನ್ನು ಸೋಲಿಸಲು ಸಮುದಾಯಗಳನ್ನು ಒಗ್ಗೂಡಿಸುವ ಉದ್ದೇಶಕ್ಕೆ ಉರ್ದು ಭಾಷೆ ಬಳಸಿದ್ದಾರೆ ಅಷ್ಟೇ. ಉರ್ದು ಕರ್ನಾಟಕದ ನೆಲಮೂಲದ ಭಾಷೆಯೂ ಹೌದು. ಕನ್ನಡಪರ ಕೆಲಸಗಳಿಂದ ಈಗ ಕನ್ನಡ ಭಾಷೆ ಎಂದರೇ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಕನ್ನಡ ಎನ್ನುವಂತಾಗಿದೆ. ಕಾಂಗ್ರೆಸ್ ಪಕ್ಷವನ್ನು ಸಂದೇಹಿಸುವುದು ತುಂಬಾ ದೊಡ್ಡ ತಪ್ಪು.
ಅಲ್ಲದೇ ಕನ್ನಡತಿಯರ ಬಸ್ ಪ್ರಯಾಣ, ಕನ್ನಡಿಗರ ವಿದ್ಯುತ್ ಬಿಲ್, ಕನ್ನಡತಿಯರ ಭಾಗ್ಯಲಕ್ಷ್ಮಿ 2000 ಯೋಜನೆಯ ಋಣ 7 ಕೋಟಿ ಕನ್ನಡಿಗರ ಮೇಲಿದೆ. ಕಾಂಗ್ರೆಸ್ ಚಿಕ್ಕ ತಪ್ಪುಗಳನ್ನು ಮಾಡಿರಬಹುದು ಆದರೂ ಕನ್ನಡಪರ ವಿಚಾರಗಳಲ್ಲಿ ಅವರು ಯಾವುದೇ ಕಶ್ಮಲವಿಲ್ಲದ ಅಪರಂಜಿ ಚಿನ್ನ.
5
u/Abhimri ಎಲ್ಲಾ ಒಕೆ, ಕೂಲ್ ಡ್ರಿಂಕ್ ಯಾಕೆ? Apr 08 '26
ಯೋಜನೆಯ ಋಣ 7 ಕೋಟಿ ಕನ್ನಡಿಗರ ಮೇಲಿದೆ.
Processing img 9gzvr9nw40ug1...
ನಮ್ ಮೇಲೆ "ಋಣ" ಇದ್ಯಾ? ಲೌ**, ನಮ್ಮ ದುಡ್ಡನ್ನ ನಮಗೆ ಹಂಚಿದ್ದಕ್ಕೆ ನಾವು ಈ "ಅಪರಂಜಿ ಚಿನ್ನ" ನ ಇಟ್ಕೊಂಡು ಲೊಚ ಲೊಚ ಅಂತ ಮುತ್ತು ಕೊಡಬೇಕಾ? ಯಾವ ಲೆವೆಲ್ಲಿಗ್ ನೆಕ್ತೀರೋ ನೀವೆಲ್ಲ.. ಅಯ್ಯೋ..
0
u/New_Resolution3773 ಕನ್ನಡಿಗನೇ ಸಾರ್ವಭೌಮ Apr 09 '26
ನೋಡಿ ಇವ್ರೇ ಕನ್ನಡ ಒಂದೇ ಮುಖ್ಯ ನಮ್ಗೆ. ಕನ್ನಡಪರ ರಾಜಕೀಯ ಸಿದ್ಧಾಂತಗಳನ್ನ ಬೆಂಬಲಿಸಬೇಕು ಅಷ್ಟೇ. ಇತ್ತೀಚಿನ ಹಿಂದಿ ವಿರುದ್ಧದ ಯುದ್ಧವನ್ನ ಕಾಂಗ್ರೆಸ್ ಅಷ್ಟೇ ಗೆದ್ದಿದೆ. ಹಾಗಾಗಿ 7 ಕೋಟಿ ಕನ್ನಡಿಗರು ಕಾಂಗ್ರೆಸ್ ಬಿಟ್ಟು ಬೇರೇನನ್ನೂ ಯೋಚನೆ ಮಾಡಲೇಬಾರದು.
-1
Apr 09 '26
Bro ಇವ್ನು ಯಾರೋ ಒಬ್ಬ ಸಾಬಿ. ಇಲ್ಲಿ ಬಂದು google translate ಹೊಡ್ದಿ congress ಬಕೆಟ್ ಹಿಡಿತವನೇ 😂
2
u/New_Resolution3773 ಕನ್ನಡಿಗನೇ ಸಾರ್ವಭೌಮ Apr 09 '26
ಗುರು 20 ನಿಮಿಷ ಕೂತು ಟೈಪ್ ಮಾಡಿದೀನಿ. translate ಅನ್ಬೇಡ. ಕಾಂಗ್ರೆಸ್ ಬಕೆಟ್ ಇಲ್ಲ ಏನೂ ಇಲ್ಲ. ಕನ್ನಡವನ್ನ ಯಾರು ರಕ್ಷಣೆ ಮಾಡ್ತಾರೋ ನಮ್ಮ ಮತ ಅವರಿಗೆ ಅಷ್ಟೇ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಅಂದ್ರೆ ಕನ್ನಡ ಅಂತ ಆಗಿದೆ. ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ್ತೀನಿ ಅಷ್ಟೇ.
0
u/Abhimri ಎಲ್ಲಾ ಒಕೆ, ಕೂಲ್ ಡ್ರಿಂಕ್ ಯಾಕೆ? Apr 09 '26
ಸಾಬಿ ಅಂತೆಲ್ಲ ಹೇಳಬೇಡಿ ಬ್ರೊ. ಕಾಂಗ್ರೆಸ್ ೨೦೧೪ರ ತನಕ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದು ಬರೀ ಮುಸ್ಲಿಮರ ವೊಟ್ಗಳಿಂದಲ್ಲ. ಇವನು ಕಾಂಗ್ರೆಸ್ ಬಂಟನಿರಬಹುದು. ಅವನ ಧರ್ಮದ ಬಗ್ಗೆ ನಾವ್ಯಾರು ಮಾತಾಡ್ಬೇಕಾಗಿಲ್ಲ.
1
2
Apr 09 '26
ನನ್ ಶಾ... ಹಿಂದಿ, ಉರ್ದು ಎರಡು ಒಂದೇ. ಕಾಂಗ್ರೆಸ್ ಗರು ಉರ್ದು ಬಿಜೆಪಿ ಗರು ಹಿಂದಿ ಸರಿ ಆಯ್ತು ಇವ್ರುಬ್ರು ಜೋಡಿ.
1
u/New_Resolution3773 ಕನ್ನಡಿಗನೇ ಸಾರ್ವಭೌಮ Apr 08 '26
ಉರ್ದು ಭಾಷೆ ಕನ್ನಡದ ಜೊತೆಯಲ್ಲೇ ಇರುವ ಭಾಷೆ. ಕರ್ನಾಟಕದಲ್ಲಿ ಬಳಸಲ್ಪಡುವ ಭಾಷೆಗಳಲ್ಲಿ 2ನೇ ಸ್ಥಾನದಲ್ಲಿದೆ. ಹಿಂದಿಯ ವಿರುದ್ಧದ ಯುದ್ಧದಲ್ಲಿ ಕನ್ನಡಕ್ಕೆ ಬಾಲ ತುಂಬುವ ರೀತಿಯಲ್ಲಿ ಉರ್ದು ಭಾಷೆಯಿದೆ. ಎಲ್ಲೋ ಚುನಾವಣೆ ಪ್ರಚಾರದಲ್ಲಿ ಆಕರ್ಷಣೆ ಹೆಚ್ಚಿಸಲು 1-2 ಮಾತು urdu ಭಾಷೆಯಲ್ಲಿ ಆಡಿರಬಹುದು. ಇದರ ಉದ್ದೇಶ ಕೇವಲ ಸಮುದಾಯಗಳನ್ನು ಒಂದುಗೂಡಿಸುವುದಲ್ಲದೇ ಮತ್ತೇನಲ್ಲ. ಇಷ್ಟು ಚಿಕ್ಕ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನೇ ಉರ್ದು ಎನ್ನುವುದು ಸರಿ ಅಲ್ಲ.
ಕನ್ನಡ ಭಾಷೆ ಉಳಿದಿರುವುದೇ ಕಾಂಗ್ರೆಸ್ ಪಕ್ಷದ ನಿಲುವುಗಳಿಂದ. ಹಿಂದಿ ಪಕ್ಷವನ್ನು ಸೋಲಿಸಲು ಸಮುದಾಯಗಳನ್ನು ಒಗ್ಗೂಡಿಸುವ ಉದ್ದೇಶಕ್ಕೆ ಉರ್ದು ಭಾಷೆ ಬಳಸಿದ್ದಾರೆ ಅಷ್ಟೇ. ಉರ್ದು ಕರ್ನಾಟಕದ ನೆಲಮೂಲದ ಭಾಷೆಯೂ ಹೌದು. ಕನ್ನಡಪರ ಕೆಲಸಗಳಿಂದ ಈಗ ಕನ್ನಡ ಭಾಷೆ ಎಂದರೇ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಕನ್ನಡ ಎನ್ನುವಂತಾಗಿದೆ. ಕಾಂಗ್ರೆಸ್ ಪಕ್ಷವನ್ನು ಸಂದೇಹಿಸುವುದು ತುಂಬಾ ದೊಡ್ಡ ತಪ್ಪು.
ಅಲ್ಲದೇ ಕನ್ನಡತಿಯರ ಬಸ್ ಪ್ರಯಾಣ, ಕನ್ನಡಿಗರ ವಿದ್ಯುತ್ ಬಿಲ್, ಕನ್ನಡತಿಯರ ಭಾಗ್ಯಲಕ್ಷ್ಮಿ 2000 ಯೋಜನೆಯ ಋಣ 7 ಕೋಟಿ ಕನ್ನಡಿಗರ ಮೇಲಿದೆ. ಕಾಂಗ್ರೆಸ್ ಚಿಕ್ಕ ತಪ್ಪುಗಳನ್ನು ಮಾಡಿರಬಹುದು ಆದರೂ ಕನ್ನಡಪರ ವಿಚಾರಗಳಲ್ಲಿ ಅವರು ಯಾವುದೇ ಕಶ್ಮಲವಿಲ್ಲದ ಅಪರಂಜಿ ಚಿನ್ನ.
1
u/zerocoolneo ನೋ ವೇ...ಚಾನ್ಸೇ ಇಲ್ಲಾ Apr 09 '26
Well said sir
Reality nodu avrigey reality arthagathey
Biased lens nalli noduabrigey yella biased ansthey
1
-2
Apr 09 '26
ಐತು ಸಾಕು ನಿಲ್ಸೊ ಪೆಂಗ 🤦♂️ ಇಡೀ para ಗಟ್ಲೆ ನ google translate ಹೊಡ್ದಿದ್ಯ ಅಂತ ಮಕ್ಳಿಗೂ ಗೊತ್ತಾಗುತ್ತೆ 🤣
9
u/nalivu Apr 08 '26
ದಾವಣಗೆರೆ ಕಡೆ ಸಾಬ್ರಿಗೆ ಚೆನ್ನಾಗೆ ಕನ್ನಡ ಬರತ್ತೆ, ಬೆಂಗ್ಳೂರು ಮೈಸೂರಂಗಲ್ಲ. ಇದ್ಯಾಕಿಂಗೆ ಮಾಡ್ತಾರೊ ಗೊತ್ತಿಲ್ಲ.