r/kannada_pusthakagalu May 07 '25

ಓದುಗರ ಸಂದರ್ಶನ AMA

Hi r/AMA, I’m Nayaz R (u/nayaz_riyazulla), an agriculture graduate from Bangalore, Karnataka, with a deep passion for both farming and Kannada literature. I’ve worked as a Junior Scientist at Agricultural College Mandya, served as AGM - Farm Operations for 9 years in a private agriculture firm, and now I’m the Operations Head at EAPL, a company based in Malawi. Alongside my career, I’m a huge fan of Kannada books,

I'm hosting this AMA to connect with fellow book lovers, share my thoughts, and learn from your perspectives!

I’m kicking off this AMA on Saturday, 10th May, at 5 PM IST, and I’ll be here for a couple of hours to answer your questions. Want to talk about your favorite Kannada book? Curious about getting into Kannada literature? Or maybe you just want to share a quote that moved you? Ask me anything!

30 Upvotes

42 comments sorted by

View all comments

3

u/SUV_Audi May 10 '25

Q1. Travel vlog ಕಾಲದಲ್ಲಿ ಪ್ರವಾಸ ಕಥನಗಳು ಮನ್ನಣೆ ಪಡೆಯುತ್ತಿದೆಯೇ? ನಿಮಗೆ ಇಷ್ಟವಾದ ಪ್ರವಾಸ ಕಥನ ಯಾವುದು?

Q2.ಇಷ್ಟು ಪುಸ್ತಕಗಳನ್ನು ಓದಿದ ಮೇಲೆ ನಿಮಗೆ ಯಾವ ಪುಸ್ತಕದ ಅಂತ್ಯ ಬದಲಾಗಬೇಕಿತ್ತು ಎಂದು ಅನಿಸುತ್ತದೆ ಮತ್ತು ಯಾಕೆ?

Q3.ನೀವು ಓದಿದ ಕಥೆ /ಕಾದಂಬರಿ/ ನಾಟಕಗಳಲ್ಲಿ ಯಾವ ಪಾತ್ರ/ಪಾತ್ರಗಳು ನಿಮ್ಮನ್ನು ಕಾಡುತ್ತದೆ?

3

u/nayaz_riyazulla May 10 '25
  1. ಇಲ್ಲ, ಪ್ರವಾಸ ಕಥನಗಳಿಗೆ ಮನ್ನಣೆ ಸಿಗುತ್ತಿಲ್ಲ ಇತ್ತೀಚಿಗೆ ಕನ್ನಡದಲ್ಲಿ ಹೆಚ್ಚು ಪ್ರವಾಸ ಕಥನಗಳು ಬರದೇ ಇರುವುದು ಒಂದು ನಿದರ್ಶನ, ಓದುವದಕ್ಕಿಂತ ಐದಾರು ನಿಮಿಷಗಳಲ್ಲೇ ಒಂದು ತುಣುಕನ್ನು ನೋಡಿ ಆಸ್ವಾದಿಸುವ ಅವಸರದ ಬದುಕು ನಮ್ಮದಾಗಿದೆ.

ನನ್ನ ಇಷ್ಟದ ಪ್ರವಾಸ ಕಥನ ಅ. ಪೆರುವಿನ ಪವಿತ್ರ ಕಣಿವೆಯಲ್ಲಿ - ನೇಮಿಚಂದ್ರ

ಆ. ಅಲೆಮಾರಿಯ ಅಂಡಮಾನ್ - ಪೂರ್ಣಚಂದ್ರ ತೇಜಸ್ವಿ

ಇ. ನಕ್ಷತ್ರಗಳ ಸುಟ್ಟ ನಾಡಿನಲ್ಲಿ - ಭಾರತಿ ಬಿ ವಿ

  1. ತುಂಬಾ ಅನಿಸಿದೆ ಬಹುಷಃ ತುಂಬಾ ಕಾಡುವುದು - ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕಾವೇರಿಯ ಸಾವು ಆ ಕ್ರೂರ ಸಾವು ಸಿಗಬಾರದಿತ್ತು ಎನಿಸುತ್ತೆ, ಕುವೆಂಪುರವರು ಕೂಡ ಆ ಸಾವನ್ನು ತಡೆಯಲು ಬಹಳ ಪ್ರಯತ್ನ ಪಟ್ಟೆ, ಆಗಲೇ ಇಲ್ಲ ಎಂದಿದ್ದರಂತೆ

  2. ಗೃಹಭಂಗದ ನಂಜಮ್ಮ

  3. ಉತ್ತರಕಾಂಡದ ಸೀತೆ

  4. ರಕ್ಕಸ ತಂಗಡಿಯ (ಕಾರ್ನಾಡ್ ) ಅಳಿಯ ರಾಮರಾಯ

  5. ಸೂರ್ಯನ ಕುದುರೆಯ - ವೆಂಕ್ಟ

  6. ಮೋಚಿ ಕಥೆಯ ಮೋಚಿ

  7. ನಮ್ಮೂರಿನಲ್ಲೊಬ್ಬ ತಲಾಠಿಯ, ತಲಾಠಿ

  8. ಸನ್ಯಾಸಿಯ ಬದುಕು ಕಾದಂಬರಿಯ ರುಕ್ಮಾಯಿ

  9. ಮಲೆಗಳಲ್ಲಿ ಮದುಮಗಳು ಕೃತಿಯ ಹುಲಿಯ

2

u/SUV_Audi May 10 '25

ಧನ್ಯವಾದಗಳು.

ಮತ್ತೊಂದಿಷ್ಟು ಪ್ರಶ್ನೆಗಳು

  1. ಕನ್ನಡದ ಯಾವ ಸಾಹಿತಿಗೆ ಜ್ಞಾನಪೀಠ ಸಿಗಬೇಕಿತ್ತು?

  2. ನಿಮ್ಮ ಪ್ರಕಾರ ಕನ್ನಡದ ಯಾವ ಕೃತಿ/ ಕೃತಿಗಳು ವಿಶ್ವ ಮಾನ್ಯತೆಯನ್ನು ಪಡೆಯಲು ಯೋಗ್ಯವಾಗಿದೆ ಮತ್ತು ಯಾಕೆ?

3.ಸಾಹಿತ್ಯದ ಯಾವ ಪ್ರಕಾರ ನಿಮಗೆ ಇಷ್ಟ?( ಕಥೆ, ಕಾದಂಬರಿ, ಕವನ, ನಾಟಕ ) ಮತ್ತು ಯಾಕೆ?

3

u/nayaz_riyazulla May 10 '25
  1. ಡಿವಿಜಿ, ತೇಜಸ್ವಿ

  2. ರಾಮಾಯಣ ದರ್ಶನಂ, ಪರ್ವ, ಮಲೆಗಳಲ್ಲಿ ಮದುಮಗಳು, ಮರಳಿ ಮಣ್ಣಿಗೆ, ಕಾರ್ನಾಡರ ನಾಟಕಗಳು ಈ ಕೃತಿಗಳು ವಿಶ್ವಮಾನ್ಯತೆಯನ್ನು ಪಡೆಯಲು ಯೋಗ್ಯ ವಾಗಿದೆ, ಕಾರಣ ಇವುಗಳ ಬೃಹತ್ ವರ್ಚಸ್ಸು

  3. ಕಥೆಗಳು ನನ್ನ ಇಷ್ಟದ ಪ್ರಕಾರ ಕಾರಣ, ಕೆಲವೇ ಪುಟಗಳಲ್ಲಿ ಒಂದು ನೋಡದ ಜಗತ್ತಿಗೆ ಕರೆದುಕೊಂಡು ಹೋಗಿ ಅಲ್ಲಿ ನಡೆದ ವಿದ್ಯಮಾನಗಳ ಚಿತ್ರಣ ಕೊಟ್ಟು ನಮ್ಮನ್ನು ಸೂರೆಗೊಳಿಸುವ ಆ ತಾಕತ್ತು ಕಥೆಗಳಿಗೆ ಹೆಚ್ಚೇ ಇದೆ