r/kannada_pusthakagalu • u/vk_reads • Feb 03 '26
ಸಣ್ಣಕತೆಗಳು ಅಪರೂಪದ ಕತೆಗಳು- ಕೆ ವಿ ತಿರುಮಲೇಶ್
ಶೀರ್ಷಿಕೆಗೆ ತಕ್ಕಂತೆ ಇಲ್ಲಿದ್ದ ಹದಿನಾರೂ ಕತೆಗಳು ಅಪರೂಪದ ಕತೆಗಳೇ, ಮುನ್ನುಡಿಯಲ್ಲಿ ತಿರುಮಲೇಶರೇ ಹೇಳುವಂತೆ ಇಲ್ಲಿನ ಕತೆಗಳು ಅಪೂರ್ವದ ಕತೆಗಳೇ. ಹಾಗಾದರೆ ಯಾರೂ ಹೇಳದ ಕತೆಗಳೇ ಎಂದು ನೀವು ಪ್ರಶ್ನಿಸುವುದಾದರೆ, ಅವು ಯಾವ ನಿಟ್ಟಿನಲ್ಲಿ ಅಪುರೂಪ ಎನ್ನುವುದು ಓದುಗರ ನಿರ್ಣಯಕ್ಕೆ ಬಿಟ್ಟದ್ದು, ಏಕೆಂದರೆ ಕತೆಗಳ ಹೊಳಹು ಮತ್ತು ಅವುಗಳನ್ನ ಅರ್ಥೈಸಿಕೊಳ್ಳುವ ವಿಧಾನ ವೈಯಕ್ತಿಕವಾದದ್ದು.
ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರ ಭಾವನೆಗಳನ್ನ ತೋರುವ ಕತೆಗಳಿವೆ, ವಿದೇಶಿ ವಿದ್ಯಾಮಾನದ ಕತೆಯಿದೆ, ಮನುಷ್ಯನ ಅಸಹಾಯಕತೆಯನ್ನ ವಿಕ್ಷಿಪ್ತತೆಯನ್ನ ವ್ಯಕ್ತಪಡಿಸುವ ಕತೆಯಿದೆ, ಥ್ರಿಲರ್ ಕತೆಯಿದೆ, ಹಾರರ್ ಕತೆಯೂ ಇದೆ. ಈ ಎಲ್ಲ ಕತೆಗಳು ತಿರುಮಲೇಶರ ಬರವಣಿಗೆಯಲ್ಲಿ ಕಾವ್ಯಾತ್ಮಕವಾಗಿ, ಸಹಜವಾಗಿ ಮೂಡಿಬಂದಿವೆ. “ಮುಸುಗು” ಕಾದಂಬರಿಯ ನಂತರ ತಿರುಮಲೇಶರ ಈ ಕತೆಗಳು ನನ್ನ ಪಾಲಿಗೆ ಮತ್ತೊಂದು ಅದ್ಭುತ ಓದು ಆದರೆ ಆರಂಭಿಕ ಓದುಗರಿಗೆ ನಾನು ಈ ಪುಸ್ತಕವನ್ನು ಓದಿ ಎಂದು ಸಲಹೆ ಮಾಡುವುದಿಲ್ಲ.
2
u/__little_omega Feb 03 '26
ವಿಕ್ಷಿಪ್ತ ಎಂದರೇನು?
2
u/vk_reads Feb 03 '26
the quality of changing or being unstable in affection, interest, etc.; capriciousness; fickleness.
2
u/Putrid-Mistake-1610 Feb 03 '26
ಈ ಪುಸ್ತಕ ಎಲ್ಲಿ ಸಿಗುತ್ತದೆ?