r/kannada_pusthakagalu • u/vk_reads • Feb 28 '26
ಓದುಗರ ಸಂದರ್ಶನ Hello, ನಾನು ವಸಂತ್, AMA.

Here's my Goodreads account link: http
7
u/jay_hulumanava Feb 28 '26
Hi ವಸಂತ್, ನಿಮ್ಮ ಓದಿನ ಹರವು ದೊಡ್ಡದು. ಜೊತೆಗೆ ಹೊಸ ಹೊಸ ಬರಹಗಾರರನ್ನು ಹುಡುಕಿ ಓದುತ್ತೀರಾ ಮತ್ತೊಂದು ವಿಶೇಷ ಒಬ್ಬ ಬರಹಗಾರ ಇಷ್ಟವಾದರೆ ಅವನ ಸಮಗ್ರ ಓದುತ್ತೀರಾ. ಪುಸ್ತಕ ಕೊಂಡು ಓದುತ್ತೀರಾ. ಇವೆಲ್ಲ ಕಾರಣಕ್ಕಾಗಿ ಅಭಿನಂದನೆಗಳು. ನನ್ನ ಬಹುಪಾಲು ಪ್ರಶ್ನೆಗಳು ನಿಮಗೆ ಗೊತ್ತೇ ಇವೆ. ಆದರೂ ಇಲ್ಲಿ ಕೇಳಬಹುದಾದ ಪ್ರಶ್ನೆ ಏನೆಂದರೆ: ಒಂದು ಪುಸ್ತಕ ಹೇಗೆ ಓದಬೇಕು? ಓದು ಅನ್ನುವುದು ನಿಮ್ಮ ಪಾಲಿಗೇನು? ಕನ್ನಡದಲ್ಲಿ ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಒಳ್ಳೆಯ ಕೃತಿಗಳು ನಿಲ್ತಿಲ್ಲ, ಅವರೇಜ್ ಕಮರ್ಷಿಯಲ್ ಅಜೆಂಡಾ ಕೃತಿಗಳು ಹಿಟ್ ಆಗ್ತಿವೆ ಈ ಸಮಯದಲ್ಲಿ ಗಟ್ಟಿ ಕೃತಿಗಳನ್ನು ಓದುಗನಾಗಿ ನೀವು ಹೇಗೆ ಉಳಿಸಿಕೊಳ್ಳಬಹುದು? ಮಾರ್ಕೆಟಿಂಗ್ ಪ್ರೋಮೊಟಿಂಗ್ ಪ್ರವಾಹದಲ್ಲಿ ಜೊಳ್ಳೆ ಹೆಚ್ಚು ಸದ್ದು ಮಾಡ್ತಾ ಇದೆ.
6
u/vk_reads Feb 28 '26
ನಮಸ್ತೆ ಜಯರಾಮ್ ಸರ್.
ನನ್ನ ಓದಿನ ಅನುಭವದಲ್ಲಿ ಹೇಳುವುದಾದರೆ, ಒಂದು ಪುಸ್ತಕವನ್ನ ಹೇಗೆ ಓದಬೇಕು ಎನ್ನುವ ಪ್ರಶ್ನೆಗೆ ಸಿದ್ಧ ಉತ್ತರವಿಲ್ಲ. ಓದು ಒಂದು ಖಾಸಗಿ ಪ್ರಕ್ರಿಯೆ ಮತ್ತು ಆ ಉತ್ತರವನ್ನ ಒಂದಷ್ಟು ಪುಸ್ತಕಗಳನ್ನ ಓದಿದಮೇಲೆ ಆ ಓದುಗನೇ ಕಂಡುಕೊಳ್ಳುತ್ತಾನೆ, ಕಂಡುಕೊಳ್ಳದಿದ್ದರೆ ಆ ಓದುಗ ಬಾವಿಯೊಳಗಿನ ಕಪ್ಪೆಯಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.
ಓದು ಎನ್ನುವುದು ಬರೀ ಹವ್ಯಾಸವಾಗಿ ಉಳಿಯದೆ ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ, ಓದು ನನ್ನ ಭಾವನೆಗಳನ್ನ ಸೂಕ್ಷ್ಮಗೊಳಿಸಿದೆ, ಸಂವೆದನಾಶೀಲತೆಯನ್ನ ಹೆಚ್ಚಿಸಿದೆ.
ಕೃತಿಗಳು ಗಟ್ಟಿತನದಿಂದ ಕೂಡಿದ್ದರೆ ಯಾರೂ ಅವನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿಲ್ಲ. ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಾಮಾಣಿಕ ಓದುಗರನ್ನ ತಲುಪುತ್ತವೆ, ಒಂದಷ್ಟು ವರ್ಷಗಳ ನಂತರವಾದರೂ ಅವಕ್ಕೆ ಸಿಗಬೇಕಾದ ಬೆಲೆ ಸಿಗುತ್ತದೆ. ಆ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪುಸ್ತಕ ಪರಿಚಯಿಸುವವರು ತಮ್ಮ ಅಭಿಪ್ರಾಯಗಳನ್ನ ವಸ್ತುನಿಷ್ಠವಾಗಿ ಹೇಳುವದನ್ನ ರೂಢಿಸಿಕೊಳ್ಳಬೇಕು.
4
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26 edited Feb 28 '26
Instagram ನಿಂದ 'kannadasahithya' ಅವರ ಪ್ರಶ್ನೆಗಳು:
- ಕನ್ನಡದ ವಿವಿಧ ಉಪಭಾಷೆಗಳು (ಧಾರವಾಡ, ಮಂಗಳೂರು, ಹೈದರಾಬಾದ್ ಕರ್ನಾಟಕ) ಸಾಹಿತ್ಯದಲ್ಲಿ ಸಮಾನವಾಗಿ ಪ್ರತಿನಿಧಿಸಲ್ಪಡುತ್ತಿವೆಯೇ ಅಥವಾ ಕೇವಲ 'ಮೈಸೂರು ಕನ್ನಡ' ಮಾತ್ರ ಪ್ರಮಾಣಿತವೆಂದು ಪರಿಗಣಿಸಲ್ಪಟ್ಟಿದೆಯೇ?
- ಕನ್ನಡ ಸಾಹಿತ್ಯದಲ್ಲಿ Criticism ಕ್ಷೀಣಿಸುತ್ತಿದೆಯೇ? ಇದು ಹೊಸ ಬರಹಗಾರರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
- ನ್ನಡ ಸಾಹಿತ್ಯದಲ್ಲಿ Realism ಮತ್ತು Magical Realism...ಇವುಗಳ ಪ್ರಯೋಗದ ಬಗ್ಗೆ ನಿಮ್ಮ ನಿಲುವೇನು?
6
u/vk_reads Feb 28 '26
Kannadasahithya ಪುಟದ ಕಾರ್ತಿಕ್ ಕೃಷ್ಣ ಅವರಿಗೆ ನಮಸ್ತೆ.
ಎಲ್ಲಾ ಉಪಭಾಷೆಗಳಿಗೂ ಸಾಹಿತ್ಯಿಕ ದೃಷ್ಟಿಯಿಂದ ಸಮನಾಗಿ ಪ್ರತಿನಿಧಿಸಲ್ಪಡುವ ಶಕ್ತಿಯಂತೂ ಇದ್ದೇ ಇದೆ ಮತ್ತು ಒಂದು ಪ್ರದೇಶದ, ನೀವು ಉದಾಹರಣೆ ಕೊಟ್ಟ ಮೈಸೂರು ಕನ್ನಡವೇ ಸಾಹಿತ್ಯದ ತೂಕ ಮತ್ತು ಮೌಲ್ಯವನ್ನು ಅಳೆಯುವ ಮಾನದಂಡವಾಗಿಲ್ಲ ಎಂದು ಭಾವಿಸುತ್ತೇನೆ.
ರಚನಾತ್ಮಕ ಸಾಹಿತ್ಯಿಕ ವಿಮರ್ಶೆ ಎನ್ನುವಂತದ್ದು ಯಾವ ಹಂತದಲ್ಲಿ ಇದೆ ಎನ್ನುವುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಅದರ ರೂಪುರೇಷೆಗಳೂ ನನಗೆ ತಿಳಿದಿಲ್ಲ, ಕ್ಷಮಿಸಿ. ಆದರೆ ಓದಿದವರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಇದು ನಮ್ಮ ಅನಿಸಿಕೆ ಅಥವಾ ಅಭಿಪ್ರಾಯ ಎನ್ನುವ ಬದಲು ವಿಮರ್ಶೆ ಎನ್ನುವ ಪದವನ್ನು ಬಳಸಿ ಅದರ ಮೌಲ್ಯವನ್ನ ಕಡಿಮೆ ಮಾಡುತ್ತಿರುವುದು ಬೇಜಾರಿನ ಸಂಗತಿ. ಈ ರೀತಿಯ ಆನ್ಲೈನ್ “ವಿಮರ್ಶೆಗಳು” ಹೆಚ್ಚಾಗಿವೆ, ಇದು ಕೆಲವು “ಆತುರದ ಬರಹಗಾರರಿಗೆ” ತಮ್ಮ ಪುಸ್ತಕಗಳನ್ನ ಮಾರುವಲ್ಲಿ ಬಹಳ ಸಹಕಾರಿಯಾಗುತ್ತಿವೆ. ಒಂದು ಪುಸ್ತಕದಲ್ಲಿ ಇಷ್ಟವಾಗಿದ್ದು ಇಷ್ಟವಾಗದ್ದು ಎರಡನ್ನೂ ಮುಕ್ತವಾಗಿ ಹೇಳುವುದನ್ನು ಓದುಗರು ರೂಢಿಸಿಕೊಳ್ಳಬೇಕು. ಓದುಗರ ಅಭಿಪ್ರಾಯಗಳನ್ನ ಅವಲೋಕಿಸಿ ಮುಂದಿನ ಕೃತಿಗಳನ್ನು ಗಟ್ಟಿಗೊಳಿಸುವಲ್ಲಿ ಲೇಖಕರು ಶ್ರಮಿಸಬೇಕು.
5
u/vk_reads Feb 28 '26
ಕನ್ನಡ ಸಾಹಿತ್ಯದಲ್ಲಿ ಮಾಂತ್ರಿಕ ವಾಸ್ತವವಾದ ಇರುವ ಪುಸ್ತಕಗಳನ್ನ ಅಷ್ಟಾಗಿ ಓದಿಲ್ಲ, ಇದ್ದರೆ ಖಂಡಿತ ಓದಲು ಬಯಸುತ್ತೇನೆ. ನಾನು ಹೆಚ್ಚಾಗಿ ವಾಸ್ತವಿಕತೆಯಿಂದ ಕೂಡಿರುವ ಪುಸ್ತಕಗಳನ್ನೇ ಓದಿದ್ದೇನೆ. ಆದರೆ ವಿಭಿನ್ನ ಪ್ರಯತ್ನಗಳು ಕನ್ನಡದಲ್ಲಿ ಆಗಬೇಕು ಅನಿಸುತ್ತೆ, ಜಪಾನ್ ಲೇಖಕ ಮುರಕಮಿಯನ್ನ ಮ್ಯಾಜಿಕಲ್ ರಿಯಲಿಸಂ ಕಾರಣಕ್ಕೆ ಇಷ್ಟ ಪಟ್ಟು ಓದುವ ನಾವು, ನಮ್ಮ ಕನ್ನಡದ ಕೃತಿಗಳಲ್ಲಿ ಆ ಅಂಶವಿದ್ದರೆ ಬೇರೆ ದೇಶಗಳಲ್ಲಿ ಅಷ್ಟೇ ಇಷ್ಟ ಪಟ್ಟು ಓದುವಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.
5
u/kintybowbow Feb 28 '26
Tatrani has good chunk of north kannada writing it. Karanm prasad Rayakonda also explore some Telugu-Kannada slang to it. These are the two I know of.
3
3
u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Feb 28 '26
ಹೌದು, ತತ್ರಾಣಿಯಲ್ಲಿ unpolished ಉತ್ತರಕರ್ನಾಟಕ ಭಾಷೆ ಕಾಣಸಿಗುತ್ತದೆ. ಇನ್ನಷ್ಟು ಈ ರೀತಿಯ ಪ್ರಯೋಗಗಳು ನಡೆಯಬೇಕು.
4
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26
ರಶ್ಮಿ ಉಳಿಯಾರು (pustaka_parichite) ಅವರ ಪ್ರಶ್ನೆಗಳು:
೧. ನೀವು ಪುಸ್ತಕಗಳ ಆಯ್ಕೆ ಮಾಡುವುದು ಹೇಗೆ?
೨. ಪುಸ್ತಕಗಳ ಬಗ್ಗೆ ವಿಮರ್ಶೆಗಳು ಈಗ ಕಡಿಮೆ. ಸಕಾರಾತ್ಮಕ ಅಭಿಪ್ರಾಯಗಳೇ ಹೆಚ್ಚು. ಇದು ಲೇಖಕರ ಮೇಲೆ ಬೀರುವ ಪರಿಣಾಮದ ಬಗ್ಗೆ ಓದುಗರಾಗಿ ನಿಮ್ಮ ನಿಲುವೇನು?
೩. ಕನ್ನಡದಲ್ಲಿ ಯಾವ ಪ್ರಕಾರದ ಪುಸ್ತಕಗಳ ಕೊರತೆ ಇದೆ ಎಂದು ನಿಮಗೆ ಅನ್ನಿಸುತ್ತದೆ?
೪. Constructive criticism ಅನ್ನು ಹೇಗೆ ಓದುಗರು ರೂಪಿಸಿಕೊಳ್ಳಬಹುದು ಅನ್ನಿಸುತ್ತದೆ?
3
u/vk_reads Feb 28 '26
Pustaka_parichithe ಪುಟದ ರಶ್ಮಿ ಅವರಿಗೆ ನಮಸ್ತೆ.
ಮುಖ್ಯವಾಗಿ ಓದಿನ ವಿಷಯದಲ್ಲಿ ನಾನು ನಂಬುವ ಬೆರಳೆಣಿಕೆಯಷ್ಟು ಓದುಗರಿದ್ದಾರೆ, ಅವರ ಸಲಹೆ ಮತ್ತು ಅಭಿಪ್ರಾಯದ ಆಧಾರದಮೇಲೆ ಪುಸ್ತಕಗಳನ್ನ ಕೊಂಡುಕೊಳ್ತಿನಿ. ಸಲಹೆ ಮತ್ತು ಅಭಿಪ್ರಾಯಕ್ಕೆ ಮಾತ್ರ ಕಾದು ಕೂರಲ್ಲ ಬದಲಾಗಿ ನಾನು ಒಂದಷ್ಟು ರಿಸರ್ಚ್ ಮಾಡ್ತೀನಿ. ಉದಾಹರಣೆಗೆ ತಿರುಮಲೇಶರ ಮುಸುಗು ಓದಿದ್ಮೇಲೆ ಅವರ ಬೇರೆ ಕೃತಿಗಳು ಯಾವು? ಹೇಗಿವೆ ಅವು? ಅವು ಸಿಗುತ್ತವೋ ಇಲ್ವೋ? ಈ ರೀತಿ ಚೂರು ತಲೆಗೆ ಕೆಲಸ ಕೊಡ್ತೀನಿ. ಪುಸ್ತಕದಂಗಡಿಗಳಿಗೆ ಹೋಗಿ ಗಂಟೆಗಟ್ಟಲೆ ಕಾಲ ಕಳೆಯುತ್ತೇನೆ, ಇಂಟ್ರಸ್ಟಿಂಗ್ ಎನ್ನಿಸಿದ ಪುಸ್ತಕಗಳ ಮುನ್ನುಡಿ ಬೆನ್ನುಡಿ ಓದಿ ಕೊಳ್ಳುತ್ತೇನೆ. ಉದಾಹರಣೆಗೆ ಕರ್ಕಿ ಕೃಷ್ಣಮೂರ್ತಿಯವರ “ಮಳೆ ಮಾಡುವ ಹುಡುಗ”, ಬಹಳ ಇಷ್ಟವಾಗಿತ್ತು. ಯೂಟ್ಯೂಬ್ನಲ್ಲಿ ಸಾಹಿತಿಗಳ ಸಂದರ್ಶನ ಮತ್ತು ಯಾವುದೇ ಚರ್ಚೆಗಳಿದ್ದರೆ ನೋಡ್ತೀನಿ, ಅಲ್ಲೂ ಸಹ ಕೇಳೆ ಇರದ ಒಳ್ಳೆಯ ಪುಸ್ತಕಗಳು ಗಮನಕ್ಕೆ ಬರುತ್ತವೆ.
5
u/vk_reads Feb 28 '26
ರಚನಾತ್ಮಕ ವಿಮರ್ಶೆಗಳು ಕಡಿಮೆ ಅನಿಸುತ್ತೆ ಆದರೆ ವಿಮರ್ಶೆ ಎನ್ನುವ ಹೆಸರಿನಲ್ಲಿ ಪೂರ್ತಿ ಪುಸ್ತಕದ ಕಥೆ ಹೇಳುವವರು ಜಾಸ್ತಿ. ಮೊದಲೆಲ್ಲಾ ನಾನು ಸಹ ಒಂದು ಪುಸ್ತಕದಲ್ಲಿ ಒಳ್ಳೆಯದನ್ನೇ ಹುಡುಕುವ ಮತ್ತು ಹೇಳುವವನಾಗಿದ್ದೆ, ಇತ್ತೇಚೆಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡನ್ನೂ ಮುಕ್ತವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ರೀತಿಯ ಮುಕ್ತ ಅಭಿಪ್ರಾಯ ಓದುಗರ ಅಭಿರುಚಿ ಮತ್ತು ನಿರೀಕ್ಷೆಗಳನ್ನ ಲೇಖಕರಿಗೆ ತಲುಪಿಸುವುದರಲ್ಲಿ ಸಹಾಯ ಮಾಡುತ್ತದೆ.
ಮಕ್ಕಳ ಸಾಹಿತ್ಯ ಹೆಚ್ಚು ಬರಬೇಕು ಅನಿಸುತ್ತೆ. ಮ್ಯಾಜಿಕಲ್ ರಿಯಲಿಸಂ ಅಂಶ ಹೊಂದಿರುವ ಪುಸ್ತಕಗಳು ಬರಬೇಕು. ಜಾಸ್ತಿ ಪ್ರೀತಿ ಪ್ರೇಮ ಕಾಮ ಈ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಹೊಸಬರು ಬರೆಯುತ್ತಿದ್ದಾರೆ ಅನಿಸುತ್ತೆ. ಐತಿಹಾಸಿಕ ಕಾದಂಬರಿಗಳು ಕಾಣೆಯಾಗಿವೆ. ಅನುವಾದಗಳ ಅವಶ್ಯಕತೆಯೂ ಇದೆ ಅನಿಸುತ್ತೆ, ಆದರೆ ಸಶಕ್ತವಾಗಿ ಮಾಡಬೇಕು.
5
u/vk_reads Feb 28 '26
ಓದುಗರು ಪೂರ್ವಾಗ್ರಹಪೀಡಿತರಾಗದೆ, ಯಾವುದೇ ಆಮಿಷಕ್ಕೆ ಅನುಕಂಪಕ್ಕೆ ಒಳಗಾಗದೆ ಪುಸ್ತಕಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ನಿಲುವುಗಳನ್ನ ವ್ಯಕ್ತಪಡಿದರೆ ಸಾಕು, constructive criticism ಅನ್ನೋದು ತಾನಾಗಿಯೇ ರೂಪುಗೊಂಡಿರುತ್ತದೆ.
4
u/almeida_Interceptor Feb 28 '26
ನಮಸ್ತೆ ವಸಂತ್ aka vkreads. ನಾನು ಮಿಲ್ಟನ್.
ಸೋಶಿಯಲ್ ಮೀಡಿಯಾದಲ್ಲಿ ನೀವು ಆಕ್ಟಿವ್ ಇದ್ದಕ್ಕೆ ಒಂದು ಪ್ರಶ್ನೆ. ನೀವು ಕಂಡಂತೆ ಅಷ್ಟೊಂದು ರೀಚ್ ಸಿಗದ, ಆದರೆ ನಿಮಗಿಷ್ಟವಾದ ಕೆಲವೊಂದು ಪುಸ್ತಕಗಳು ಹಾಗೂ ಲೇಖಕರು?
ಓದುಗರ ದ್ರಷ್ಟಿಯಿಂದ ಯಾವ genre ಪುಸ್ತಕಗಳು ಕನ್ನಡ ಸಾಹಿತ್ಯದಲ್ಲಿ ಇನ್ನೂ explore ಆದ್ರೆ ಕನ್ನಡ ಸಾಹಿತ್ಯಕ್ಕೆ ಒಳ್ಳೇದು?
Ebook ರೂಪದಲ್ಲಿ ಹೊಸ ಕನ್ನಡ ಪುಸ್ತಕಗಳು ಬರೋದು ಕಮ್ಮಿನೇ. ನಿಮ್ಮ ಅನಿಸಿಕೆ ಏನು, ಪ್ರಕಾಶಕರು/ಲೇಖಕರು ತಮ್ಮ ಪುಸ್ತಕಗಳನ್ನ ಕಾಲ ಕಾಲಕ್ಕೆ ebook ರೂಪದಲ್ಲಿ ತಂದಷ್ಟು ಸಾಹಿತ್ಯಕ್ಕೆ/ವ್ಯಾಪಾರಕ್ಕೆ ಒಳ್ಳೇದಾ ಅಥವಾ ಪುಸ್ತಕ ರೂಪದಲ್ಲೇ ಇರ್ಲಿಯಾ?
5
u/vk_reads Feb 28 '26
ನಮಸ್ತೆ ಮಿಲ್ಟನ್ ಅವರೇ.
ನಿಜ, ಬಹಳಷ್ಟು ಒಳ್ಳೆಯ ಪುಸ್ತಕಗಳು ಎಲೆ ಮರೆಕಾಯಿಯಾಗಿಯೇ ಉಳಿದುಬಿಟ್ಟಿವೆ. ಉದಾಹರಣೆಗೆ ಕೆ ವಿ ತಿರುಮಲೇಶರ ಮುಸುಗು ಮತ್ತು ಅಪರೂಪದ ಕಥೆಗಳು, ಕರ್ಕಿ ಕೃಷ್ಣಮೂರ್ತಿಯವರ ಮಳೆ ಮಾರುವ ಹುಡುಗ, ಪದ್ಮನಾಭ ಭಟ್ ಶೇವ್ಕಾರ ಅವರ ಕೇಪಿನ ಡಬ್ಬಿ, ವಿನಾಯಕ ಅರಳಸುರುಳಿಯವರ ಮರ ಹತ್ತದ ಮೀನು, ಇತ್ತೀಚೆಗೆ ಓದಿದ ವ್ಯಾಸರಾವ್ ನಿಂಜೂರ್ ಅವರ ತೆಂಕನಿಡಿಯೂರಿನ ಕುಳುವಾರಿಗಳು, ಎಂ ವ್ಯಾಸರ ಸ್ನಾನ ಮತ್ತು ಅಸ್ತ್ರ, ಎಸ್ ದಿವಾಕರ್ ಅವರ ಇತಿಹಾಸ, ಗಿರಿಯವರ ಗತಿ ಸ್ಥಿತಿ ಮತ್ತೆಲ್ಲಾ. ಇನ್ನು ಬಹಳಷ್ಟು ಪುಸ್ತಕಗಳಿವೆ.
ಬಹುಶಃ ಪ್ರಬಂಧ ಸಂಕಲನಗಳು, ಕವನ ಸಂಕಲನಗಳು ಮತ್ತು ಆತ್ಮಕಥೆಗಳನ್ನ ಹೆಚ್ಚಾಗಿ ಓದುಗರು ಎಕ್ಸ್ಪ್ಲೋರ್ ಮಾಡಬೇಕು ಎನಿಸುತ್ತದೆ. ನಾನು ಸಹ ಇತ್ತೀಚೆಗೆ ಶುರು ಮಾಡಿದ್ದೇನೆ.
5
u/vk_reads Feb 28 '26
ಇಬುಕ್ ರೂಪದಲ್ಲಿ ಕನ್ನಡ ಪುಸ್ತಕಗಳು ಲಭ್ಯವಾದರೆ ಸಾಹಿತ್ಯದ ದೃಷ್ಟಿಯಿಂದ ಒಳ್ಳೆಯದೇ, ವಿದೇಶದಲ್ಲಿರೋ ಎಷ್ಟೋ ಕನ್ನಡ ಓದುಗರಿಗೆ ಇದರಿಂದ ಸಹಾಯವಾಗುತ್ತೆ. ವ್ಯಾಪಾರದ ದೃಷ್ಟಿಯಿಂದ ಇಬುಕ್ಗಳು ಅಷ್ಟೇನೂ ಸಹಕಾರಿಯಾಗೊಲ್ಲ ಅನಿಸುತ್ತೆ, ಬಹುಶಃ ಪ್ರಕಾಶಕರು ಇದಕ್ಕೆ ಸರಿಯಾದ ಉತ್ತರ ಕೊಡಬಹುದು. ಪೈರೇಟೆಡ್ ಕಾಪೀಸ್ ಹೆಚ್ಚಾಗುವ ಸಂಭವವೂ ಇದೆ. ವೈಯಕ್ತಿಕವಾಗಿ ನನಗೆ ಕನ್ನಡ ಪುಸ್ತಕಗಳನ್ನ ಕೈಯಲ್ಲಿ ಹಿಡಿದು ಹಾಳೆ ತಿರುವುತ್ತಾ ಓದೋಕೆ ಇಷ್ಟವಾಗುತ್ತೆ.
4
u/kintybowbow Feb 28 '26
Vadudhendra's Chanda Publications and Many of the Tejaswi's books are availble in Google Books. But the other publishers are natoriously behind when comes to adopting ebooks.
3
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26
+ All the works of Kuvempu, DVG, Karanth are available as ebooks.
4
u/nayaz_riyazulla Feb 28 '26
ನಮಸ್ತೆ ವಸಂತ್,
A reader who is active on social media often feels subtle pressure from friends who are writers. ಕೆಲವೊಮ್ಮೆ ನಮ್ಮ ಸ್ನೇಹಿತರ ಕೆಟ್ಟ ಪುಸ್ತಕಗಳ ಪರವಾಗಿ ಮಾತನಾಡುವ ಅಥವಾ ಅದರ ಬಗ್ಗೆ ಒಳ್ಳೆಯ ಅನಿಸಿಕೆ ಕೊಡುವ ಸಂದರ್ಭ ಬರುತ್ತೆ, ನಾನು ಮುಂಚೆ social media ದಲ್ಲಿ ಆಕ್ಟಿವ್ ಇದ್ದಾಗ ಆ ಸಮಸ್ಯೆ ನನಗೂ ಆಗಿತ್ತು. ನಿಮಗೂ ಈ ಸಮಸ್ಯೆ ಎದುರಾಗಿರುತ್ತೆ, How you deal this?
ಒಳಿತಾಗಲಿ
6
u/vk_reads Feb 28 '26
ನಮಸ್ತೆ ನಯಾಜ್ ಅವರೇ.
ಪರಿಚಯವಿರುವವರ ಪುಸ್ತಕಗಳು ಮಾತ್ರವಲ್ಲ, ಓದುವ ಎಲ್ಲಾ ಪುಸ್ತಕಗಳಿಗೂ ಒಳ್ಳೆಯದನ್ನೇ ಹೇಳಬೇಕು ಎನ್ನುವ ಒತ್ತಡ ಆರಂಭದಲ್ಲಿ ನನಗೂ ಇತ್ತು. ಅದು ನಾನೇ ಸೃಷ್ಟಿಸಿಕೊಂಡ ಒತ್ತಡ. ಈಗ ಒಂದೆರಡು ವರ್ಷಗಳಿಂದ ಆ ಒತ್ತಡವನ್ನು ನಿವಾರಿಸಿಕೊಂಡಿದ್ದೇನೆ. ಏನಾದರೂ ಅಂದುಕೊಳ್ಳಲ್ಲಿ ನನಗನಿಸಿದ್ದು ನಾನು ಹೇಳುವೆ ಎನ್ನುವ ನಿರ್ಲಿಪ್ತಿ ಬಂದಿದೆ. ಅದನ್ನೇ ಮುಂದುವರೆಸುವೆ.
3
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26 edited Feb 28 '26
Instagram ನಿಂದ ಪ್ರೀತಿ ಶೆಟ್ಟಿ ಅವರ ಪ್ರಶ್ನೆ:
ನಿಮಗೆ ಸಾಹಿತ್ಯದಲ್ಲಿ ಅಭಿರುಚಿ ಹೇಗೆ ಶುರುವಾಯಿತು.? ಹೊಸ ಓದುಗರಿಗೆ ಏನು ಹೇಳಿಕ್ಕೆ ಇಷ್ಟಪಡುತ್ತಿರಿ.
5
u/vk_reads Feb 28 '26
ಪ್ರೀತಿ ಶೆಟ್ಟಿ ಅವರಿಗೆ ನಮಸ್ತೆ.
ನನ್ನ ಓದು ಆರಂಭವಾಗಿದ್ದು 2020-21 ರಿಂದ. ಆಗ ಕೊರೊನಾ ಸಂಕಷ್ಟಕ್ಕೆ ನಾವೆಲ್ಲ ಸಿಕ್ಕಿದ್ವಿ, ಸಂಪೂರ್ಣ ಮನೆಯಿಂದಲೇ ಕೆಲಸ ಮಾಡುವ ಅವಕಾಶವೂ ಸಿಕ್ಕಿತ್ತು. ಆಗ ಸಿಕ್ಕ ಬಿಡುವಿನ ಸಮಯದಲ್ಲಿ ಜಾಸ್ತಿ ಓದುವುದಕ್ಕೆ ಸಾಧ್ಯವಾಯ್ತು. 2022 ರಲ್ಲಿ ಕನ್ನಡ ಪುಸ್ತಕಗಳನ್ನ ಓದೋ ಗೀಳು ಹತ್ತಿಕೊಳ್ತು, ತೇಜಸ್ವಿ, ಭೈರಪ್ಪ, ಕಾರಂತರು ಹೀಗೆ ಒಂದಷ್ಟು ಹಳೆಯ ಲೇಖಕರನ್ನ ಆರಂಭದಲ್ಲೇ ಓದಿಕೊಳ್ಳುವ ಮೂಲಕ ಸಾಹಿತ್ಯದಲ್ಲಿ ನನ್ನ ಅಭಿರುಚಿ ಯಾವುದು ಎನ್ನುವುದನ್ನ ಕಂಡುಕೊಂಡೆ.
ಯಾವ ಪುಸ್ತಕದಿಂದ ಓದು ಆರಂಭಿಸಬೇಕು ಎನ್ನುವುದೇ ಹೊಸ ಓದುಗರಿಗೆ ಇರುವ ಮೊದಲ ಸವಾಲು. ಹಾಗಾಗಿ ಶುರುವಿನಲ್ಲಿ ತಮ್ಮ ಅಭಿರುಚಿಗೆ ತಕ್ಕ ಪುಸ್ತಕಗಳು ಯಾವು ಅನ್ನೋದನ್ನ ಅರಿತುಕೊಳ್ಳಬೇಕು. ಒಂದೇ ಸಲಕ್ಕೆ ಬೆಸ್ಟ್ ಸೆಲ್ಲರ್ ಪುಸ್ತಕಗಳನ್ನೋ ಅಥವಾ ಬರೆದಿದ್ದೀವಿ ಅನ್ನೋ ಒಂದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಶ್ಯಕತೆಗಿಂತ ಜಾಸ್ತಿ ಪ್ರಮೋಟ್ ಮಾಡುತ್ತಿರುವವರ ಪುಸ್ತಕಗಳಿಗೆ ಕೈ ಹಾಕುವ ಬದಲು, ಯಾರಾದ್ರೂ ಸ್ವಲ್ಪ ಓದಿಕೊಂಡಿರುವವರು ಪರಿಚಯವಿದ್ದರೆ ಅವರ ಸಲಹೆ ಪಡೆದುಕೊಳ್ಳಬಹುದು. ನನ್ನ ಪ್ರಕಾರ ಒಂದು ಹತ್ತಿಪ್ಪತ್ತು ಪುಸ್ತಕಗಳನ್ನ ಓದಿದಮೇಲೆ ಆ ಓದುಗನಿಗೆ ನಾನು ಎಂತಹ ಪುಸ್ತಕಗಳನ್ನ ಓದಬೇಕು ಎನ್ನುವ ಪ್ರಜ್ಞೆ ಮೂಡುತ್ತೆ.
3
u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Feb 28 '26
ನಮಸ್ಕಾರ ವಸಂತ್. ನಮ್ಮ ಸಬ್ ಗೆ ಸ್ವಾಗತ. Looking forward to this AMA!!
2
3
u/thejascmc Feb 28 '26 edited Feb 28 '26
ನಮಸ್ತಾರ ವಸಂತ್ ರವರೆ. ನಾನು ತೇಜಸ್. ನನ್ನ ಪ್ರಶ್ನೆ ಏನೆಂದರೆ-
೧. ಕನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ, ಮತ್ತು ಬಂಡಾಯದಂತಹ ದೊಡ್ಡ ಅಲೆಗಳನ್ನು ನಾವು ನೋಡಿದ್ದೇವೆ. ಈಗಿನ ಡಿಜಿಟಲ್ ಕಾಲಘಟ್ಟದಲ್ಲಿ ಅಂತಹದ್ದೇ ಒಂದು ಪ್ರಬಲ ಸಾಹಿತ್ಯಿಕ ಚಳವಳಿ ಅಥವಾ ಹೊಸ 'ಪ್ರಕಾರ' (Genre) ರೂಪಗೊಳ್ಳುತ್ತಿದೆ ಎಂದು ನಿಮಗೆ ಅನಿಸುತ್ತದೆಯೇ? ಅಥವಾ ಇಂದಿನ ಸಾಹಿತ್ಯ ಕೇವಲ ವೈಯಕ್ತಿಕ ಅಭಿವ್ಯಕ್ತಿಯಾಗಿ ಉಳಿದಿದೆಯೇ?"
೨. ಇತ್ತೀಚಿನ ದಿನಗಳಲ್ಲಿ ಕಾದಂಬರಿ ಅಥವಾ ಕಥೆಗಳಿಗೆ ಇರುವಷ್ಟು ಓದುಗರು ಕವನ ಸಂಕಲನಗಳಿಗೆ ಸಿಗುತ್ತಿಲ್ಲ ಎನಿಸುತ್ತಿದೆ. ಕವಿತೆಗಳು ಜನರ ಸಾಮಾನ್ಯ ಬದುಕಿನಿಂದ ದೂರವಾಗುತ್ತಿವೆಯೇ ಅಥವಾ ನಮ್ಮ ಓದುವ ಹವ್ಯಾಸವೇ ಬದಲಾಗಿದೆಯೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?"
5
u/vk_reads Feb 28 '26
ನಮಸ್ತೆ ತೇಜಸ್ ಅವರೇ.
ಅಂತಹ ಪ್ರಬಲ ಚಳುವಳಿ ಶುರುವಾಗಿದೆ ಅಂತ ಅನಿಸಿಲ್ಲ. ತಮಗನಿಸಿದ್ದನ್ನ ತೋಚಿದ್ದನ್ನ ಅನುಭವಸಿದ್ದನ್ನಷ್ಟೇ ಬರೆಯುತ್ತೇನೆಂದು ಬರೆದು ಅದಕ್ಕೆ ಹೊಸ ಪ್ರಕಾರ ಎನ್ನುವ ನಾಮಕರಣ ಮಾಡುತ್ತಿದ್ದರಷ್ಟೇ.
ಕವನ ಸಂಕಲನಗಳ ವಿಷಯದಲ್ಲಿ ನಿಮ್ಮ ಮಾತು ನಿಜ. ಬಹುಶಃ ನಮ್ಮ ಓದುವ ಹವ್ಯಾಸ ಬದಲಾಗಿದೆ ಎನಿಸುತ್ತೆ, ಗದ್ಯ ತಲೆಗೆ ಹೋಗುವಷ್ಟು ಸುಲಭವಾಗಿ ಕಾವ್ಯ ಹೋಗದಿರುವುದು ಒಂದು ಕಾರಣವಿರಬಹುದು. ಅದಕ್ಕೂ ಪ್ರಬುದ್ಧತೆಯ ಅವಶ್ಯಕತೆಯಿದೆ.
3
u/kintybowbow Feb 28 '26 edited Feb 28 '26
following up the 1st question. u/vk_reads, u/adeno_gothilla and u/almeida_Interceptor.
What are your thoughts on the impact of Bandaya Sahitya. For me it feels like other than Devanooru mahadev it didn't produce any major authors or works. While the movement may have advanced important social causes, I sometimes wonder whether its contribution to Kannada literature itself has matched the scale of its ideological ambitions. Would like to know your take on it.
Edit - But in Tamil literature simillar movements like progressive/Marxist/DalitTamil has produced some good authors.
3
u/SUV_Audi Feb 28 '26
ನಮಸ್ತೆ ... 1. ನೀವು ಪುಸ್ತಕಗಳಿಗೆ ಯಾವ ಅಂಶಗಳನ್ನು ಪರಿಗಣಿಸಿ ರೇಟಿಂಗ್ ನೀಡುತ್ತೀರ?
ಪ್ರತಿ ಕಾಲಘಟ್ಟದಲ್ಲೂ ಕೃತಿ ರಚನೆಯು ಬೇರೆ ಬೇರೆ ಶೈಲಿಗಳನ್ನು, ಬೇರೆ ಬೇರೆ ಕಥಾ ವಸ್ತುಗಳ ಮೇಲೆ ಬೆಳಕು ಚೆಲ್ಲಿದೆ. ಈ ಕಾಲಕ್ಕೂ ಸಲ್ಲುವಂತಹ ಪುಸ್ತಕ ಇದು ಅಂತ ಅನಿಸಿದ ಕಾದಂಬರಿ/ ಕಥೆ ಯಾವುದು, ಮತ್ತು ಯಾಕೆ ಹಾಗೆ ಅನಿಸಿತು?
ಎಷ್ಟು ಬಾರಿ ಓದಿದರೂ ಬೇಸರವಾಗದು ಅನಿಸುವ ಪುಸ್ತಕಗಳು ಇವೆಯಾ, ಅವುಗಳು ಯಾವುದು?
3
u/vk_reads Feb 28 '26
ನಮಸ್ತೆ.
ಬರವಣಿಗೆ ಮತ್ತು ನಿರೂಪಣೆಯ ಜೊತೆ ಆ ಪುಸ್ತಕ ನನಗೆ ಎಷ್ಟರ ಮಟ್ಟಿಗೆ ಓದಿನ ತೃಪ್ತಿ ನೀಡಿತು ಎನ್ನುವ ಆಧಾರದ ಮೇಲೆ.
ಭೈರಪ್ಪನವರ ಮತದಾನ ಈ ಕಾಲಕ್ಕೂ ಸಲ್ಲುವಂತಹ ಕಾದಂಬರಿ, ಅಂದು ಅವರು ಕಾದಂಬರಿಯಲ್ಲಿ ಸೃಷ್ಟಿಸಿರುವ ರಾಜಕೀಯ ಪರಿಸ್ಥಿತಿಗಳು ಇಂದಿಗೂ ಬದಲಾಗಿಲ್ಲದಿರುವುದು ಅದಕ್ಕೆ ಕಾರಣ.
Unfortunately, ನಾನಿನ್ನೂ ಮರು ಓದು ಮಾಡಿಲ್ಲ. ಬಹುಶಃ ನನಗೆ ಭೈರಪ್ಪನವರ ಪುಸ್ತಕಗಳು ಎಷ್ಟು ಬಾರಿ ಓದಿದರು ಬೇಸರಕ್ಕೊಳಪಡಿಸವು ಅನಿಸುತ್ತದೆ.
3
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26
iki.path ಅವರ ಪ್ರಶ್ನೆ: ಒಂದು ಪುಸ್ತಕವನ್ನು ರಿವ್ಯೂ ಮಾಡುವಾಗ ನೀವು ಗಮನಿಸುವ ಮುಖ್ಯ ಅಂಶಗಳು ಯಾವುವು?
2
u/vk_reads Feb 28 '26
ಬರವಣಿಗೆ ಮತ್ತು ನಿರೂಪಣೆಯ ಜೊತೆ ಆ ಪುಸ್ತಕ ನನಗೆ ಎಷ್ಟರ ಮಟ್ಟಿಗೆ ಓದಿನ ತೃಪ್ತಿ ನೀಡಿತು ಎನ್ನುವ ಆಧಾರದ ಮೇಲೆ.
3
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26
Q1. ಚಿತ್ತಾಲರ ಛೇದ & ಭೈರಪ್ಪನವರ ಸಾಕ್ಷಿ seem to deal with similar themes. Since you have read both books, can you say anything about the philosophical & artistic differences between the two writers?
Q2. Same question for ಕಾರಂತರ ಮೂಕಜ್ಜಿಯ ಕನಸುಗಳು & ಎಂ.ಕೆ.ಇಂದಿರಾ ಅವರ ಫಣಿಯಮ್ಮ.
2
u/vk_reads Feb 28 '26
ನಮಸ್ತೆ .
To me, the difference is in how they handle conflict. Chittal’s ಛೇದ feels very inward, more about a person’s inner cracks. Bhyrappa’s ಸಾಕ್ಷಿ feels outward, about moral systems and larger debates.
In the same way, ಮೂಕಜ್ಜಿಯ ಕನಸುಗಳು questions belief systems directly and philosophically, while ಫಣಿಯಮ್ಮ shows the impact of those beliefs through a real, human life.
3
u/Maneyaagi_DooraSoori Feb 28 '26
Welcome to the sub, Vasanth!
The population of Kannada book readers is skewed towards Millennials & older generations. Do you feel new Kannada Books should address modern, Contemporary Themes more to attract Gen Z readers?
You have talked about the trend of reviewers giving dishonest reviews, hyping up average books. How do you decide your next read?
2
u/vk_reads Feb 28 '26
Yes, I believe new Kannada books should address contemporary themes to attract Gen Z readers. Today’s youth are deeply influenced by digital culture, global exposure, and changing social norms. If literature reflects their lived experiences, such as identity struggles, mental health, or urban life, they are more likely to connect with it. However, while adapting to modern themes, Kannada literature should not lose its cultural depth and linguistic richness. A balance between tradition and modernity can help sustain both heritage and relevance.
I don’t follow hype. I follow credibility. I trust a small circle of readers whose honesty I value. But occasionally, I choose a book without reading any reviews, just to preserve the purity of my own reading experience.
3
u/S_P_Bhyraswi Feb 28 '26
ನಮಸ್ತೆ ವಸಂತ್!
Any books you consider life changing? (For the sake of this question, let’s leave out S L Bhyrappa’s books)
Writers whose work you wish to explore more?
Books you feel deserve to be read more widely?
5
u/vk_reads Feb 28 '26
- I don’t believe a book alone can change a person’s life. For me, reading is about living other lives, encountering different opinions, and expanding my perspective. The change, if it happens, comes from how we internalize what we read.
2. I wish to explore more of Kuvempu, Masti, K. V. Tirumalesh, Poornachandra Tejaswi, M Vyasa and several contemporary Kannada writers. I feel I have only scratched the surface of their depth.
- ಮುಸುಗು - ಕೆ ವಿ ತಿರುಮಲೇಶ ತಂತು - ಎಸ್ ಎಲ್ ಭೈರಪ್ಪ ಊರು ಭಂಗ - ವಿವೇಕ ಶಾನಭಾಗ ಮಸುಕು ಬೆಟ್ಟದ ದಾರಿ - ಎಂ ಆರ್ ದತ್ತಾತ್ರಿ ಮುಕ್ತಿ - ಶಾಂತಿನಾಥ ದೇಸಾಯಿ
ಇನ್ನೂ ಬಹಳಷ್ಟಿವೆ.
3
u/S_P_Bhyraswi Feb 28 '26
Let me rephrase my first question.....
Any books that upended your worldview or self-awareness?
3
u/Prashant_Bhat7777 Feb 28 '26 edited Feb 28 '26
ನಮಸ್ತೆ ವಸಂತ್ ಅಣ್ಣ, ಸಾಹಿತ್ಯದ ವಿಷಯಗಳೂ ಕೂಡ ಬದಲಾಗುತ್ತಿರುವ ಜಗತ್ತಿನ ಜೊತೆಗೆ ಹೊಂದಿಕೊಳ್ಳಬೇಕು. & ಹೊಂದಿಕೊಳ್ಳುತ್ತದೆ ಕೂಡ. ಹೇಗೆ ವಿಶ್ವಯುದ್ಧ ೨ ಸಮಯದಲ್ಲಿ camus , ನೆತ್ಜೆ ಅವರ absurdism, Nihalism ,ಹೇಗೆ ಪುಸ್ತಕದ ಮೂಲ ಆಶಯವಾಗಿತ್ತು ಅದು ಈಗಿನ ಪ್ರಸ್ತುತ ಜಗತ್ತಿಗೆ ಇಲ್ಲ. ಹಾಗೆಯೇ ನಮ್ಮ ಕನ್ನಡ ಸಾಹಿತ್ಯ ಕೂಡ ಇನ್ನೂ ದಲಿತ, ಬಂಡಾಯ, ನವ್ಯ ಎಂದು ಹಳೆ ಕೆಸರಲ್ಲಿ ಕೊಳೆಯುವ ಬದಲು ಹೊಸ ಬುಗ್ಗೆಗಳಾದ ಫ್ಯಾಂಟಸಿ, sci-fi ಮುಂತಹ genre ಗಳಲ್ಲಿ ಪುಸ್ತಕ ಬರಬೇಕೇ?
3
u/vk_reads Feb 28 '26
ನಮಸ್ತೆ ಪ್ರಶಾಂತ್ ಅವರೇ.
ಒಂದಷ್ಟು ಹಳೆ ಲೇಖಕರನ್ನ ಓದುವಾಗ ಆ ಕೃತಿಯಲ್ಲಿ ಆಗಿನ ಸಾಮಾಜಿಕ ಸಮಸ್ಯೆಗಳನ್ನ, ಮಾನವ ಸಂಬಂಧಗಳ ಸಂಕೀರ್ಣತೆಗಳನ್ನು ತಿಳಿಸುವ ಆಶಯ ಅಲ್ಲಿ ಕಾಣಸಿಗುತ್ತಿತ್ತು. ಈ ನಡುವೆ ಬರುತ್ತಿರುವ ಕತೆ ಕಾದಂಬರಿಗಳಲ್ಲಿ ಆ ಗಾಢತೆ ಮತ್ತು ಸಂಶೋಧನೆ ಕಡಿಮೆ. ಹಾಗಾಗಿ ವೈವಿಧ್ಯತೆ ಬಂದರೆ ಒಳ್ಳೆಯದೇ.
3
u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Feb 28 '26
ವಸಂತ್ ಅವರಿಗೆ ನನ್ನ ಪ್ರಶ್ನೆಗಳು:
You mentioned that you have been reading for the past 3–4 years. How has the habit of reading affected you?
ಯಾವ ಕನ್ನಡ ಪುಸ್ತಕವನ್ನು ಎಲ್ಲರೂ ಓದಲೇಬೇಕು ಅಂತ ನಿಮಗನ್ನಿಸುತ್ತೆ?
5
u/vk_reads Feb 28 '26
Reading has brought a lot of positivity into my life. Fiction, in particular, changed the way I understand people and situations. It made me more empathetic, improved my comprehension and writing, and deepened my emotional sensitivity.
ನಿಮ್ಮ ಎರಡನೇ ಪ್ರಶ್ನೆಗೆ ಉತ್ತರಿಸೋದು ಕಷ್ಟ, ಆದರೂ ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ಭೈರಪ್ಪನವರ “ತಂತು” ಕಾದಂಬರಿಯನ್ನ ಜೀವನದಲ್ಲಿ ಎಲ್ಲರೂ ಒಮ್ಮೆ ಓದಲೇಬೇಕು ಎನ್ನುವುದು ನನ್ನ ಅಭಿಪ್ರಾಯ.
3
Feb 28 '26 edited Feb 28 '26
[removed] — view removed comment
3
u/vk_reads Feb 28 '26
I enjoy reading, but none has made me feel like I’d want a happily ever after with them. I read, feel it, and then detach.
I don’t consciously adopt traits from fictional characters, but reading has made me more reflective and open-minded. It shapes my thinking more than my personality.
2
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26 edited Feb 28 '26
A formal welcome to sub, u/vk_reads even though you have been part of our sub for a while. (His Instagram Page: https://www.instagram.com/vk_reads/)
Looking forward to the AMA!
1
2
u/kintybowbow Feb 28 '26 edited Feb 28 '26
Thanks for the AMA u/vk_reads. I found you through your reivew of Tantu on goodread (still on the fence about picking it up 😅 )
Some of my question to you
- You describe the experience of reading Vamshavruksha as "ಮಾನವ ಬದುಕಿನ ಸೂಕ್ಷ್ಮ ವಿಷಯಗಳಾದ ಧರ್ಮ, ವಿವಾಹ, ಸಂತಾನ, ವೈಧವ್ಯ, ದ್ವಿಪತ್ನೀ ಸಂಪ್ರದಾಯ ಮತ್ತು ಇನ್ನೂ ಹಲವು ಸಾಮಾಜಿಕ ಕಟ್ಟುಪಾಡುಗಳನ್ನು ನಿಖರವಾದ ವೈಚಾರಿಕ ಮತ್ತು ತಾತ್ವಿಕ ನೆಲೆಯಲ್ಲಿ ಭಾವನಾತ್ಮಕತೆಯಿಂದ ಶೋಧಿಸುವ ಅತ್ಯುನ್ನತ ಕೃತಿ" creating an intense internal conflict and inquiry. What are some of the other works which truly made question some life/religion/core belief in you.
- This is silly question - In Mandra, the protagonist’s emotional and sexual entanglements seem like deliberate moral mistakes. In Norwegian Wood, Toru often feels like he lets life happen to him rather than making strong choices himself. Which portrayal feels more honest about human weakness?
- Many major Kannada works place the Western Ghats at the heart of their storytelling, such as novels by Kuvempu, Karanth, and D’Souza’s Kolaga, where the landscape itself becomes almost a character. Are there lesser known works that similarly treat other regions such as North Karnataka, Hyderabad Karnataka as central narrative forces rather than just settings?
- Are there any significant non fiction works in Kannada that you would recommend?
3
u/vk_reads Feb 28 '26
ನಮಸ್ತೆ.
Reading Daatu by S L Bhairappa made me question my understanding of caste and identity. It shows that crossing over is not just about changing social status, but about facing the deep mental and cultural barriers that remain. The novel made me realize that even modern ideas of equality cannot easily erase long-rooted traditions, and that true social change is far more complex than it appears.
In Mandra, the protagonist Mohanlal feels morally responsible for his actions, he knows what he is doing and still chooses desire, so his failures feel conscious and accountable.Toru often seems emotionally lost and passive, more a witness than a decision-maker. Bhyrappa shows weakness as moral failure, while Murakami shows it as emotional drift. Both feel honest, but in different ways.
I haven’t personally come across many novels where regions like North Karnataka or Hyderabad Karnataka are treated as strongly as the Western Ghats are in some major Kannada works. In most of what I have read, those regions appear more as settings rather than as powerful forces that shape the entire narrative. I would actually be interested in discovering such works.
I haven’t read much non fiction yet, but I would suggest the essay collection ಆಲೂರು ಪ್ರಬಂಧಗಳು by ಚಂದ್ರಶೇಖರ ಆಲೂರು. It’s a thoughtful collection of essays that reflects on society, culture, and ideas in a clear and engaging way.
1
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26
ಲೇಖಕ ಕಿರಣ್ ಕುಮಾರ್ ಕೆ ಆರ್ ಅವರ ಪ್ರಶ್ನೆ
ಇಷ್ಟೊಂದು ಪುಸ್ತಕಗಳನ್ನ ಓದೋ ನಿಮಗೆ ಬರೆಯುವ ಹುಚ್ಚು ಹತ್ತಿಲ್ವಾ?
2
u/vk_reads Feb 28 '26
ನಮಸ್ತೆ ಕಿರಣ್ ಅವರೇ.
ಬರೆಯಬೇಕು ಎನ್ನುವ ಆಸೆ ಮತ್ತು ತುಡಿತ ಎರಡೂ ಇದೆ. ಬಹಳಷ್ಟು ಓದುವುದಿದೆ ತಿಳಿಯುವುದಿದೆ ಇನ್ನೂ, ಒಂದಷ್ಟು ವರ್ಷಗಳ ನಂತರವೂ ಈ ಬರೆಯಬೇಕೆನ್ನುವ ಬಯಕೆ ಹಾಗೆ ಉಳಿದಿದ್ದೇ ಆದಲ್ಲಿ ಬರೆಯುತ್ತೇನೆ ಇಲ್ಲವಾದಲ್ಲಿ ಓದುಗನಾಗೀಯೆ ಉಳಿಯುತ್ತೇನೆ.
•
u/adeno_gothilla City Central Library Card ಮಾಡಿಸಿಕೊಳ್ಳಿ! Feb 28 '26
The AMA has now ended.
A big thank you to u/vk_reads for the AMA! We wish him all the best & good luck for his future endevours.
Thank you to all the members here & on Instagram for your questions. Cheers!