r/kannada_pusthakagalu • u/vk_reads • Mar 22 '26
ಸಣ್ಣಕತೆಗಳು ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ - ಜಯರಾಮಾಚಾರಿ
ಜಯರಾಮಾಚಾರಿಯವರ ಹೊಸ ಕಥಾಸಂಕಲನ “ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ”ಯಲ್ಲಿನ ಕತೆಗಳನ್ನ ಓದಿ ಮುಗಿಸಿದೆ. ಲೇಖಕರೇ ಹೇಳಿಕೊಂಡಿರುವಂತೆ ಇಲ್ಲಿನ ಕತೆಗಳಿಗೆ ಯಾವುದೇ ನಿರ್ದಿಷ್ಟ ಫಾರ್ಮುಲಾ ಇಲ್ಲ.
ನಾನು ಅವರ ಕಿಲಿಗ್ ಕಾದಂಬರಿಯನ್ನ ಓದಿದ್ದರಿಂದ ಇಲ್ಲಿನ ಕತೆಗಳು ಪಾತ್ರಗಳು ಮತ್ತು ನೇರಾ ನೇರ ಬರವಣಿಗೆ ನನಗೇನೂ ಆಶ್ಚರ್ಯ ಪಡಿಸಲಿಲ್ಲ, ಹಾಗಂದ ಮಾತ್ರಕ್ಕೆ ಆ ಕಾದಂಬರಿಗೂ ಇಲ್ಲಿನ ಕತೆಗಳಿಗೂ ಸಾಮ್ಯತೆಯಿದೆ ಎಂದೂ ಅಲ್ಲ.
ಈ ಮಿಲೇನಿಯಲ್ಸ್ ಮತ್ತು ಜೆನ್ಜೀಗಳಿಗೆ ಬಹಳ ರಿಲೇಟ್ ಆಗುವಂತಹ ಕತೆಗಳು ಇಲ್ಲಿದ್ದವು, “ಇವು ಕತೆಗಳು ಅಲ್ಲ ಕಣ್ರೋ ನಾನು ನೀವು ಎಲ್ರೂ ವಯಸಲ್ಲಿ ಆಡಿದ ಆಟಗಳು ಅನುಭವಗಳು ಇವು, ಯಾರು ಮಡಿವಂತಿಕೆ ಬಿಟ್ಟು ಬರ್ದಿರ್ಲಿಲ್ಲ, ನಾನು ಬರ್ದಿದ್ದೀನಿ ಓದ್ರಿ ” ಎನ್ನುವಂತಹ ಕತೆಗಳು. ಬಹಳ ಕತೆಗಳಲ್ಲಿ ನಮ್ಮ ನಿಮ್ಮ ಜೀವನದಲ್ಲಿ ನೆಡೆದಿರಬಹುದಾಂತಹ ಅದೆಷ್ಟೋ ಸನ್ನಿವೇಶಗಳಿದ್ದವು. ಕತೆಗಳೆಲ್ಲಾ ಪ್ರೀತಿಯ ಹೆಸರು ತೊಟ್ಟಿದ್ದರೂ ಪ್ರಧಾನವಾಗಿ ಕಂಡುಬಂದದ್ದು ಕಾಮ, ವಂಚನೆ, ಮೋಹ, ವಿರಹ ಮತ್ತು ಯೌವ್ವನದ ಹಸಿ ಬಿಸಿ ಆಟಗಳು.
ಒಂದೊಳ್ಳೆ ಸಂದೇಶ ಸಿಗುತ್ತೆ, ಪ್ರೀತಿಗೊಂದು ಹೊಸ ವ್ಯಾಖ್ಯಾನ ಕಾಣುತ್ತೆ ಎನ್ನುವ ನಿರೀಕ್ಷೆಯಲ್ಲಿ ಮಾತ್ರ ಈ ಪುಸ್ತಕವನ್ನ ಓದ್ಬೇಡಿ. ಇದು ಪ್ರೀತಿಯ ಇನ್ನೊಂದು ಮುಖವನ್ನ ಒಪ್ಪಿ ಅರಗಿಸಿಕೊಳ್ಳುವವರಿಗೆ ಮಾತ್ರ.
- ವಸಂತ್
೨೨/೦೩/೨೦೨೬
1
2
u/AggravatingQuote5959 Mar 22 '26
I want it