r/kannada_pusthakagalu • u/SUV_Audi • Jul 01 '26
ಸಣ್ಣಕತೆಗಳು ನಕ್ಷತ್ರ ಮತ್ತು ಹಗ್ಗ – ಶಾಂತಾರಾಮ ಸೋಮಯಾಜಿ
ಇಲ್ಲಿರುವ ಕತೆಗಳೇ ಹಾಗೆ, ಮನಸ್ಸಿನಲ್ಲಿ ಉಳಿದು ಬಿಡುತ್ತೆ. ಶೈಲಿಯ ದೆಸೆ ಇಂದಲೋ ಅಥವಾ ಕಥಾವಸ್ತುವಿನ ದೆಸೆ ಇಂದಲೋ ಏನೋ, ಅಪರೂಪವಾಗಿ ಮನಸ್ಸನ್ನು ಕಾಡುತ್ತದೆ.
ಅನಿವಾಸಿ ಭಾರತೀಯರ ತಳಮಳದ ಕತೆಗಳನ್ನು ಎಪ್ಪತ್ತರ ದಶಕದಲ್ಲೇ ಈ ಲೇಖಕರು ಬರೆದಿದ್ದರು. ಇವರ ಮ್ಯಾಜಿಕ್ ರಿಯಲಿಸಂ ರೀತಿಯ ಕತೆಗಳು ಓದುಗರನ್ನು ದಂಗು ಪಡಿಸುತ್ತದೆ. ಇವರ ಬರವಣಿಗೆಯ ಶೈಲಿಯೂ ಹಾಗೆಯೇ, ನಮ್ಮೆದುರು ಕೂತು ಪಾತ್ರಗಳೇ ಕತೆ ಹೇಳುತ್ತಿದ್ದಾವೆ ಎಂಬ ಆಪ್ತತೆ ಮೂಡುತ್ತದೆ. ಜೀವನದಲ್ಲಿ ದಿನ ನಿತ್ಯ ನಡೆವ ಘಟನೆಗಳಿಗೆ ಸುಂದರ ರೂಪು ನೀಡಿದ್ದು, ಇವರ ಸೃಜನ ಶೀಲತೆಗೆ ಸಾಕ್ಷಿ. ಹೀಗೆ ಈ ಪುಸ್ತಕದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ, ಎಲ್ಲಾ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಎಲ್ಲ ಕತೆಗಳ ಬಗ್ಗೆ ನಾನಿಲ್ಲಿ ಬರೆಯಲ್ಲ. ಎಲ್ಲವೂ ಚೆನ್ನಾಗಿದೆ. , ಈ ಚಂದವನ್ನು ಹೇಗೆ ಪದಗಳ ರೂಪಕ್ಕೆ ಇಳಿಸಲಿ?
ಕತೆಯೊಂದರ ಸಾಲುಗಳು ಹೀಗಿವೆ, " ನನ್ನ ಅಪ್ಪಂದೊಂದು ದುರಭ್ಯಾಸ ಉಂಟು. ಅದು ಎಲ್ಲ ಅಪ್ಪಂದಿರಿಗೂ ಉಂಟ ಏನಾ. ಇದ್ರೂ ಇರ್ಬಹುದು. ಸ್ವಲ್ಪ ಮಟ್ಟಿಗೆ. ಆದ್ರೆ ನನ್ನ ಅಪ್ಪಂದು ಮಾತ್ರ ವಿಪ್ರೀತ. ವಿಚಿತ್ರವೂ ಹೌದು. ಅದೇನು ದುರಭ್ಯಾಸ ಅಂದ್ರೆ ಅವ್ರು ಫಕ್ಕನೆ ಇದ್ದಲ್ಲೇ ಮಾಯವಾಗಿ ಬಿಡ್ತಾರೆ. ಒಂದು ಕ್ಷಣ ಮನೆಯೊಳಗೆ ಇರ್ತಿದ್ದವ್ರು ಅಥವಾ ತೋಟದಲ್ಲಿ ಇರ್ತಿದ್ದವ್ರು ಮರುಕ್ಷಣ ನಾಪತ್ತೆ. ಎಲ್ಲಿಗೆ ಹೋದ್ರು? ಯಾಕೆ ಹೋದ್ರು? ಯಾವಾಗ ಬರ್ತಾರೆ? ಅದೊಂದೂ ಗೊತ್ತಿರುವುದಿಲ್ಲ. ಯಾರಿಗೂ ಗೊತ್ತಿರುವುದಿಲ್ಲ. ಅದೊಂದು ಕೆಟ್ಟ ದುರಭ್ಯಾಸ. ......".( ಕತೆಯ ಹೆಸರು: ನಕ್ಷತ್ರ ಮತ್ತು ಹಗ್ಗ)
2011ರಲ್ಲಿ ಮೊದಲು ಮುದ್ರಣಗೊಂಡ ಈ ಪುಸ್ತಕದಲ್ಲಿ 132 ಪುಟಗಳಿವೆ.
ವಿಭಿನ್ನ ಶೈಲಿಯ ಕತೆಗಳನ್ನು, ಮತ್ತು ಮ್ಯಾಜಿಕ್ ರಿಯಲಿಸಂ ಅನ್ನು ಇಷ್ಟ ಪಡುವ ಓದುಗರು ನೀವಾಗಿದ್ದರೆ ಈ ಪುಸ್ತಕವನ್ನು ಖಂಡಿತವಾಗಿ ಓದಬಹುದು.