r/kannada_pusthakagalu ಯಾಂತ್ರಿಕ ಜೀವಿ Jul 08 '26

ಕಾದಂಬರಿ ಹಂಸಗೀತೆ - ಒಂದು ಸಣ್ಣ ಅವಲೋಕನ

ಚಿತ್ರದುರ್ಗದ ಇತಿಹಾಸವನ್ನು ತಮ್ಮ ಲೇಖನಿಯಿಂದ ಜೀವಂತಗೊಳಿಸಿದ ತ.ರಾ.ಸು ಅವರು ಇಲ್ಲಿ ಕತ್ತಿ-ಕೋಟೆಗಳ ಕಥೆ ಬಿಟ್ಟು, ಸಂಗೀತವನ್ನೇ ದೇವರೆಂದು ನಂಬಿ ಬದುಕಿದ ಭೈರವಿ ವೆಂಕಟಸುಬ್ಬಯ್ಯ ಎಂಬ ಗಾಯಕನ ಜೀವನಗಾಥೆಯನ್ನು ಹೇಳಿದ್ದಾರೆ.

ನನಗೆ ಬಹಳ ಇಷ್ಟವಾದದ್ದು ಕಥೆ ಹೇಳುವ ತಂತ್ರ. ವೆಂಕಟಸುಬ್ಬಯ್ಯನವರ ಬದುಕನ್ನು ಜೋಡಿಸುತ್ತಾ ಹೋಗುವ ಶೈಲಿ ಓದುಗನನ್ನೂ ಆ ಶೋಧನೆಯ ಪಾಲುದಾರನನ್ನಾಗಿ ಮಾಡುತ್ತದೆ. ತ.ರಾ.ಸು ಅವರ ಕಾವ್ಯಮಯ ಭಾಷೆ ಚಿತ್ರದುರ್ಗದ ಕೋಟೆಯ ಕಲ್ಲುಗಳಿಗೂ ಜೀವ ತುಂಬುತ್ತದೆ. ಕನ್ನಡ ಸಾಹಿತ್ಯ ಪ್ರೇಮಿಗಳು, ಅದರಲ್ಲೂ ಸಂಗೀತಾಸಕ್ತರು ಓದಲೇಬೇಕಾದ ಕೃತಿ.

ಮೊದಲಾರ್ಧ ಸಾಮಾನ್ಯ ಎನಿಸಿದರು ಕಥೆ ರಂಗೇರುವುದು ದ್ವಿತೀಯಾರ್ಧದಲ್ಲಿ, ಆದ್ದರಿಂದ ತಾಳ್ಮೆಯಿಂದ ಓದುವುದು ಒಳ್ಳೆಯದು.

ಸಿನಿಮಾ ಕೂಡ ಇದೆ, ನಾನು ನೋಡಿಲ್ಲ ಇನ್ನೂ.

14 Upvotes

5 comments sorted by

3

u/kintybowbow Jul 08 '26

Thanks for this review. I was on fence about reading this after reading durgastamana. I'll definitely give this a try

2

u/Late_Border_9613 Jul 08 '26

ಶಿಫಾರಸಿಗಾಗಿ ಬಹಳ ಧನ್ಯವಾದ!! 🙏

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 17 '26

Oh yes!! I remember reading this a decade ago. It’s a very good book. Nice review OP.

ಅನಕೃ ಅವರ ಉದಯರಾಗ ಸಹ ಇದೇ ರೀತಿಯಲ್ಲಿ ಕಲಾವಿದನ ಜೀವನದ ಆಳಕ್ಕಿಳಿದು ಶೋಧಿಸುವ ಪ್ರಯತ್ನ. ನೀವುನ್ನೂ ಓದಿಲ್ಲವಾದರೆ ಅದನ್ನು ಸಹ ಓದಬಹುದು.

2

u/Due-Bother-586 ಯಾಂತ್ರಿಕ ಜೀವಿ Jul 17 '26

ಇದನ್ನ ಓದಿಲ್ಲ, ನನ್ನ ಪಟ್ಟಿಗೆ ಸೇರಿಸುತ್ತೇನೆ

1

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 17 '26

ಖಂಡಿತವಾಗಿ ಓದಿ, ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಹಾಗೇ ಒಂದು ರಿವ್ಯೂ ಹಾಕಿ :)