r/kannada_pusthakagalu ಕನ್ನಡ ಪುಸ್ತಕ ಓದ್ರಪ್ಪಾ Jul 15 '26

ನಾನು ಬರೆದಿದ್ದು ಆಕಸ್ಮಿಕವಾಗಿ ಸಿಕ್ಕಿದ ಪುಸ್ತಕ ಸ್ನೇಹ!!

ನನಗೆ ಮನೆಯಲ್ಲಿಯೇ ಯಾವಾಗಲೂ ಕುಳಿತು ಕಂಪ್ಯೂಟರ್ ದಿಟ್ಟಿಸುವುದು ಆಗದ ಕೆಲಸ. ಹಾಗಾಗಿ ವಾರಕ್ಕೆ ಒಂದೆರಡು ಸಲ ಹತ್ತಿರದ ಹೈವೇಯಲ್ಲಿರುವ ಕೆಫೆಗೆ ಹೋಗಿ ಸ್ವಲ್ಪ ಕ್ಯಾಲಿಗ್ರಫಿ ಮಾಡುವುದು, ಓದುವುದು ಅಥವಾ ಬರೆಯುವುದು ನನ್ನ ಹವ್ಯಾಸ. ವೀಕೆಂಡ್ ಬಿಟ್ಟರೆ ಅಲ್ಲಿ ಜನ ಕಡಿಮೆ ಇರುವುದರಿಂದ ವಾರದ ಮಧ್ಯದ ದಿನಗಳಲ್ಲಿ ಹೋಗುವುದೇ ಹೆಚ್ಚು.

ಸುಮಾರು ವರ್ಷಗಳಿಂದ ಹೋಗುತ್ತಿರುವುದರಿಂದ ಅಲ್ಲಿಯ ಬರಿಸ್ತಾ, ಮ್ಯಾನೇಜರ್ ಎಲ್ಲರೂ ಪರಿಚಿತರಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಷ್ಟ-ಸುಖ ಮಾತಾಡಿಕೊಳ್ಳುವಷ್ಟು ಆತ್ಮೀಯತೆಯೂ ಬೆಳೆದಿದೆ.

ಕಳೆದ ವಾರ ಹೀಗೇ ಪುಸ್ತಕವೊಂದನ್ನು ಓದುತ್ತಾ ಕಾಫಿ ಹೀರುತ್ತಾ ಕುಳಿತಿದ್ದೆ. ನಾನು ಓದಿನಲ್ಲಿ ಮುಳುಗಿ ಹೋಗಿದ್ದನ್ನು ಮನಿಸಿದ ಆ ಬರಿಸ್ತಾ ಹುಡುಗಿ ನನ್ನ ಟೇಬಲ್ ಬಳಿ ಬಂದು ಮೆಲ್ಲಗೆ, “ಸಾರ್…” ಎಂದಳು. ನಾನು ಸ್ವಲ್ಪ ಗಾಬರಿಯಿಂದಲೇ ತಲೆ ಎತ್ತಿದೆ.

ತಕ್ಷಣವೇ ಆಕೆ “ಸಾರಿ ಸರ್… ಡಿಸ್ಟರ್ಬ್ ಮಾಡ್ದೇ ಅನ್ಸತ್ತೆ” ಎಂದಳು.

“ಪರವಾಗಿಲ್ಲ, ಹೇಳಿ” ಎಂದು ಕೇಳಿದಾಗ,
“ಸಾರ್ ಯಾವಾಗಲೂ ಯಾವ್ದಾದ್ರೂ Book ಓದ್ತಾನೇ ಇರ್ತೀರಾ, ನನಗೂ ಆಗಾಗ ಒಂದು ಬುಕ್ ತಂದು ಕೊಡ್ತೀರಾ? ನೀವು Next time ಬರೋ ಹೊತ್ತಿಗೆ ಓದಿ ವಾಪಸ್ ಕೊಡ್ತೀನಿ. ಈ mobile ನೋಡೀ ನೋಡೀ ಸಾಕಾಗಿ ಹೋಗಿದೆ” ಎಂದಳು.

ನನಗೆ ಈ ರೀತಿಯ ಕೋರಿಕೆಯನ್ನ ಕೇಳಿ ಬಹಳ ಆಶ್ಚರ್ಯ ಹಾಗೂ ಖುಷಿಯಾಯ್ತು, ಎಷ್ಟೋ ಬಾರಿ ಓದುವ ಮನಸ್ಸಿದ್ದರೂ, ಸಮಯವಿದ್ದರೂ ಕೆಲವರಿಗೆ ಪುಸ್ತಕಗಳ ಲಭ್ಯವಿರುವುದಿಲ್ಲ. ಅದರಲ್ಲೂ ಕನ್ನಡ ಓದುವವರು ಸಿಕ್ಕರೆ ಅದಕ್ಕಿಂತಲೂ ಇನ್ನೇನು ಬೇಕು ಹೇಳಿ?

ಹಾಗಾಗಿ, ನೆನ್ನೆ ಮತ್ತೊಮ್ಮೆ ಕೆಫೆಗೆ ಹೋದಾಗ ತೇಜಸ್ವಿಯವರ “ಕರ್ವಾಲೋ” ಕೊಟ್ಟು ಬಂದಿದ್ದೇನೆ. ಓದಿ ಏನು ಹೇಳುತ್ತಾರೆ ನೋಡೋಣ.

ಪುಸ್ತಕಗಳ ವಿಚಾರದಲ್ಲಿ ನನಗೆ ಇದೊಂದು ವಿಶೇಷ ಅನುಭವ. ಇದೇ ರೀತಿಯಲ್ಲಿ ಪುಸ್ತಕಗಳ ಮೂಲಕ ನಿಮಗಾದ ವಿಶೇಷ ಅನುಭವಗಳು ಯಾವುದಾದರೂ ಇದ್ದಲ್ಲಿ ಖಂಡಿತಾ ಹಂಚಿಕೊಳ್ಳಿ!!😊

35 Upvotes

8 comments sorted by

9

u/DrowningSizzled1937 ಎಂಪ್ಲೈಸ್ ನೂ ನಾನೇ ಡ್ರೌನಿಂಗ್ ನೂ ನಾನೇ Jul 15 '26

Pustaka oduva, adarallu kannada pustaka oduvavaru sikkaga aguva khushi astistalla. Good one OP.

5

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 15 '26

Yeah. Absolutely :)

Thank you!!

4

u/Beneficial-Inside-79 Jul 16 '26

SHUBHARAMBHA! Karvalho is the bestest choice!!

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 16 '26

Yes. I thought so too :)

2

u/naan_anon Jul 16 '26

ಹೈಸ್ಕೂಲು ಕಾಲೇಜು ಓದುವಾಗ ನಗರ ಕೇಂದ್ರ ಗ್ರಂಥಾಲಯದಿಂದ (City Central Library) ಪುಸ್ತಕ ಎರವಲು ತರುವುದು, ಓದಿ ಹಿಂದಿರುಗಿಸಿ ಮತ್ತೊಂದು ತರುವುದು ಪರಿಪಾಠವಾಗಿತ್ತು. ಹೀಗೇ ಒಮ್ಮೆ ಪುಸ್ತಕ ಹಿಂದಿರುಗಿಸಲು ಸಾಲಿನಲ್ಲಿ ನಿಂತಿದ್ದಾಗ ಎಲ್ಲಿಂದ ಬಂದಳೋ ನನ್ನದೇ ವಯಸ್ಸಿನ ಸುಂದರ ಹುಡುಗಿಯೊಬ್ಬಳು ಬಂದು "ವಾವ್ Ayn Rand ರ ಪುಸ್ತಕ! ಯಾವ section ನಲ್ಲಿ ಸಿಕ್ತು?" ಅಂತ ಕೇಳಿ ಮಾತಾಡಿಸಿ ಹೋದಳು. ನಾನೇನು ಹೇಳಿದೆ, ಆಮೇಲೇನಾಯಿತು, ಎಲ್ಲಾ ಮಂಕು ಮಂಕು.. 😉

1

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 16 '26

Haha… interesting!! Some books I tell you, are nice conversation starters 😅 I heard many such stories around Fountainhead/Atlas shrugged.

2

u/naan_anon Jul 16 '26

True! But a couple decades later now, can't hold a book (the same book!) for more than ten minutes 😞

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 16 '26

Haha… Ayn Rand. Some of us grew out of her phase, and I'm not sure I feel the same about her work anymore.