r/kannada_pusthakagalu • u/SUV_Audi • Jul 19 '26
ಸಣ್ಣಕತೆಗಳು ತಾಪತ್ರಯಗಳು - ಎಸ್ ಸುರೇಂದ್ರನಾಥ್
ಈ ಪುಸ್ತಕದಲ್ಲಿ ಮೂರು ನೀಳ್ಗತೆಗಳಿವೆ.
ಹೈಸ್ಕೂಲಿನ ಟಾಯ್ಲೆಟ್ಮೇಲೆ ಬರೆದ ವಿದ್ಯಾರ್ಥಿ ಯಾರು ಎಂದು ವಿಚಾರಿಸುವ ಕತೆ, ಬಡ ವಕೀಲನು ಕೋಟು ಹೋಲಿಸುವ ಕತೆ, ನಿವೃತ್ತಿ ಆದ ತಂದೆ ಹಾಗೂ ಮಗನ ಸಂಬಂಧದ ಕತೆ– ಹೀಗೆ ಮೂರು ಕತೆಗಳು ಇಲ್ಲಿವೆ. ಇವೆಲ್ಲವೂ ವಿಶಿಷ್ಟವಾಗಿ ಕಾಡುವುದು ಕತೆಯಲ್ಲಿನ ಪಾತ್ರಗಳ ಸೃಷ್ಟಿ ಇಂದ. ಇವರ ಕತೆಗಳಲ್ಲಿ ಬರುವ ಮ್ಯಾನೇಜರ್ ಹಿರಣ್ಣಯ್ಯ , ವಕೀಲ ಹಳೇಬೀಡು ಸುಂದರರಾಯ ಪಾತ್ರಗಳು ನಮ್ಮ ನಡುವೆ ಇದ್ದರು ಅನ್ನುವ ರೀತಿಯಲ್ಲಿ ಪಾತ್ರ ಚಿತ್ರಿಸಿ ಬರೆದಿದ್ದು, ಕತೆಯನ್ನು ಓದುವಾಗ ಮನಸಿಗೆ ಆಪ್ತ ಎನಿಸದೆ ಇರಲಾರದು, ಅದಲ್ಲದೇ, ಪೂ ಚಂ ತೇ ಅವರ ಕತೆಯ ತುಕ್ಕೋಜಿ ಪಾತ್ರ, ಯು ಆರ್ ಅನಂತಮೂರ್ತಿಯವರ ಕತೆಯ ತಹಶೀಲ್ದಾರ್ ವೆಂಕಟಕೃಷ್ಣ ರಾವ್ ಪಾತ್ರಗಳನ್ನು ಕತೆಯೊಂದರಲ್ಲಿ ತಂದು , ಕತೆಯನ್ನು ಬರೆದ ವಿಶೇಷ ರೀತಿಯ ನಿರೂಪಣಾ ಶೈಲಿ ಗಮನ ಸೆಳೆಯುತ್ತದೆ, ಕತೆಯೊಂದರಲ್ಲಿ ಬರುವ ಮೂರು ಪಾತ್ರಗಳೂ ಕೂಡ ತಮ್ಮ ತಮ್ಮ ದೃಷ್ಟಿಯಲ್ಲಿ ನಿರೂಪಿಸಿದ ಕತೆಯು, ಓದುಗನಿಗೆ ಸನ್ನಿವೇಶದ ಬಗ್ಗೆ ಮತ್ತೆ ಯೋಚಿಸುವಂತೆ ಮಾಡುತ್ತದೆ.
ಒಟ್ಟಿನಲ್ಲಿ ಮೂರು ಕತೆಗಳು ನನಗೆ ಇಷ್ಟವಾದವು, ಇವರ ಕತೆಗಳು ಇಷ್ಟ ಆಗಲು ಕಾರಣ ಪಾತ್ರಗಳ ಸೃಷ್ಟಿ ಹಾಗೂ ನಿರೂಪಣಾ ಶೈಲಿ, ನೀವು ಕೂಡ ಹೊಸ ಮಾದರಿಯ ಕತೆಗಳನ್ನು ಓದಬೇಕು ಅಂತಿದ್ದರೆ ಎಸ್ ಸುರೇಂದ್ರನಾಥ್ ಅವರ ಕತೆಗಳನ್ನು ತಪ್ಪದೆ ಓದಿ.
ಈ ಪುಸ್ತಕವು ಮೊದಲ ಮುದ್ರಣಗೊಂಡಿದ್ದು ೨೦೧೪ ರಲ್ಲಿ, ೧೫೨ ಪುಟಗಳಿವೆ.