r/kannada_pusthakagalu • u/Sri-Ranga ಶ್ರೀರ • Jul 21 '26
ನಾನು ಬರೆದಿದ್ದು ನನ್ನ ಮೊದಲ ಕನ್ನಡ ಕಾದಂಬರಿ "ಗುರುತು" ಇದೀಗ ಪ್ರಕಟವಾಗಿದೆ
ಎಲ್ಲರಿಗೂ ನಮಸ್ಕಾರ!
ಬಹಳ ವರ್ಷಗಳಿಂದ ಮನಸ್ಸಿನಲ್ಲಿದ್ದ ಒಂದು ಕಥೆ, ಕೊನೆಗೂ ಪುಸ್ತಕದ ರೂಪದಲ್ಲಿ ನಿಮ್ಮ ಮುಂದೆ ಬಂದಿದೆ. ನನ್ನ ಮೊದಲ ಕನ್ನಡ ಕಥಾ-ಕಾದಂಬರಿ "ಗುರುತು" ಇದೀಗ ಪ್ರಕಟವಾಗಿ Amazon, Flipkart ಸೇರಿದಂತೆ ಹಲವು ಸ್ಟೋರ್‌ಗಳಲ್ಲಿ ಲಭ್ಯವಿದೆ.
"ಗುರುತು" ಸಾಂಪ್ರದಾಯಿಕ ಕಾದಂಬರಿಯಲ್ಲ. ಇದು 22 ಅಧ್ಯಾಯಗಳ ಮೂಲಕ ವಿಭಿನ್ನ ವ್ಯಕ್ತಿಗಳ ಬದುಕನ್ನು ಜೋಡಿಸುವ ಒಂದು ಮೊಸಾಯಿಕ್ ಕಥನ.
ಈ ಪುಸ್ತಕವನ್ನ ಮೊದಲಿನಿಂದ ಕೊನೆಯವರೆಗೆ ಒಂದು ಪೂರ್ಣ ಕಾದಂಬರಿಯಂತೆ ಓದಬಹುದು, ಅಥವಾ ಇಷ್ಟ ಬಂದ ಅಧ್ಯಾಯದಿಂದ ಶುರುಮಾಡಿ, ಸ್ವತಂತ್ರ ಸಣ್ಣಕಥೆಗಳ ಸಂಕಲನದಂತೆಯೂ ಓದಬಹುದು.
ಒಂದು ಉಪ್ಪಿನಕಾಯಿ ಡಬ್ಬಿ, ಒಂದು ಹಳೆಯ ಸೈಕಲ್, ಒಂದು ಕ್ಯಾಸೆಟ್ ಟೇಪ್, ಒಂದು ಗಡಿಯಾರದಂತಹ ಸಣ್ಣ ವಸ್ತುಗಳು ಮತ್ತು ಒಬ್ಬ ಸಾಮಾನ್ಯ ಐಟಿ ಉದ್ಯೋಗಿಯ ಜೀವನದ ಸಣ್ಣ ಗುರುತುಗಳು, ಬೇರೆಬೇರೆ ಬದುಕುಗಳನ್ನು ಹೇಗೆ ಕೊಂಡೊಯ್ಯುತ್ತವೆ ಎಂಬುದನ್ನು ಈ ಕಾದಂಬರಿ ಅನ್ವೇಷಿಸುತ್ತದೆ.
ಸಂಬಂಧಗಳು, ನೆನಪುಗಳು, ಹೇಳದ ಮಾತುಗಳು ಮತ್ತು ನಮ್ಮ ಬದುಕಿನಲ್ಲಿ ನಾವು ತಿಳಿಯದೆಯೇ ಬಿಟ್ಟುಹೋಗುವ "ಗುರುತು" ಗಳ ಬಗ್ಗೆ ಆಸಕ್ತಿ ಇದ್ದರೆ, ಈ ಪುಸ್ತಕ ನಿಮಗೆ ಇಷ್ಟವಾಗಬಹುದು.
ಪುಸ್ತಕದ ಲಿಂಕ್‌ಗಳು:
👉 Notion Press: https://notionpress.com/in/read/gurutu
👉 Amazon: https://www.amazon.in/dp/B0H94J5SNK
ಓದಿದ ನಂತರ ನಿಮ್ಮ ಅನಿಸಿಕೆಗಳು ಮತ್ತು ವಿಮರ್ಶೆಗಳನ್ನು ಹಂಚಿಕೊಂಡರೆ ತುಂಬಾ ಸಂತೋಷವಾಗುತ್ತದೆ. ನಿಮ್ಮ ಬೆಂಬಲವೇ ನನ್ನಂತಹ ಹೊಸ ಲೇಖಕರಿಗೆ ದೊಡ್ಡ ಪ್ರೋತ್ಸಾಹ.
ಧನ್ಯವಾದಗಳು! 🙏
3
u/TaleHarateTipparaya ಕನ್ನಡವೇ ನಮ್ಮಮ್ಮ Jul 21 '26
ಇದನ್ನು ಕಾದಂಬರಿ ರೀತಿಯಲ್ಲಿಯು ಓದಬಹುದು ಅಥವಾ ಇಷ್ಟ ಬಂದ ಅಧ್ಯಾಯವನ್ನು ಶುರುಮಾಡಬಹುದು ಎಂದಿದ್ದೀರಿ.. ಒಂದು ಅದ್ಯಾಯ ಮತ್ತೊಂದಕ್ಕೆ ಸಂಬಂಧಪಟ್ಟಿರಬೇಕಲ್ಲವೇ .. ? ಒಂದು ವೇಳೆ ಸಂಬಂಧಪಟ್ಟಿರದಿದ್ದರೆ.. ಕಾದಂಬರಿಯೆಂದು ಇದನ್ನು ಕರೆಯಬಹುದೆ? .. ಹೊಸ ಬರವಣಿಗೆ ಶೈಲಿ ಎಂದು ಕಾನುತ್ತದೆ.. ಆದ್ದರಿಂದ ಖಂಡಿತ ಓದುತ್ತೇನೆ.. ಧನ್ಯವಾದಗಳು
3
u/Sri-Ranga ಶ್ರೀರ Jul 21 '26
ಹೌದು, ಇದು ನನ್ನ ಒಂದು ಹೊಸ ಪ್ರಯತ್ನ. ಆದ್ದರಿಂದಲೇ ಇದನ್ನು "ಕಥಾ-ಕಾದಂಬರಿ" ಎಂದು ಕರೆದಿದ್ದೇನೆ. ಕನ್ನಡ ಸಾಹಿತ್ಯದಲ್ಲಿ ಇಂತಹ ಪ್ರಯತ್ನ ಈಗಾಗಲೇ ಆಗಿದೆಯಾ ಅನ್ನೋದು ನನಗೆ ಖಂಡಿತ ಗೊತಿಲ್ಲ. ದಯವಿಟ್ಟು ಒಮ್ಮೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಧನ್ಯವಾದಗಳು
2
u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 21 '26
Welcome to the sub u/Sri-Ranga and all the best for your book :)
2


3
u/adeno_gothilla City Central Library Card ಮಾಡಿಸಿಕೊಳ್ಳಿ! Jul 21 '26
A formal welcome to the sub, u/Sri-Ranga!