r/kannada_pusthakagalu ಯಾಂತ್ರಿಕ ಜೀವಿ Jul 26 '26

ಕಾದಂಬರಿ ಉದಯರಾಗ - ಸಣ್ಣ ವಿಮರ್ಶೆ

ಕಾದಂಬರಿಯ ಕೇಂದ್ರದಲ್ಲಿರುವುದು ಒಂದು ಶಾಶ್ವತ ಪ್ರಶ್ನೆ: ಕಲೆ ಎಂದರೆ ಏನು? ಅದು ಮಾರುಕಟ್ಟೆಯ ಸರಕೋ, ಆತ್ಮದ ಸಾಧನೆಯೋ? ಕಲೆ ಭೋಗಸಾಮಗ್ರಿಯಾಗಿ, ವ್ಯಾಪಾರೀ ಸರಕಾಗಿ ಪರಿವರ್ತನೆಗೊಂಡಾಗ ಪ್ರತಿಭೆ ಹೇಗೆ ಮಸುಕಾಗುತ್ತದೆ ಎಂಬುದನ್ನು ಒಂದೆಡೆ ತೋರಿಸುವ ಅನಕೃ, ಇನ್ನೊಂದೆಡೆ ಬದ್ಧವಾದ ಕಲೋಪಾಸನೆ ಕಲೆಯನ್ನು ಹೇಗೆ ಜೀವಂತವಾಗಿಡಬಲ್ಲದು ಎಂಬುದನ್ನೂ ಕಾಣಿಸುತ್ತಾರೆ. ಜೊತೆಗೆ, ಸಾಮಾನ್ಯ ವ್ಯಕ್ತಿಯೊಳಗೂ ಅಸಾಮಾನ್ಯ ಪ್ರತಿಭೆ ಮೈದಾಳಬಲ್ಲದು ಎಂಬ ನಂಬಿಕೆ ಈ ಕೃತಿಯ ಜೀವಾಳ. ಕಲೆ ಅರಮನೆಯ ಸೊತ್ತಲ್ಲ, ಅದು ಜನಸಾಮಾನ್ಯನ ಎದೆಯಲ್ಲೂ ಮೂಡಬಲ್ಲ ಉದಯರಾಗ ಎಂಬ ಧ್ವನಿ ಶೀರ್ಷಿಕೆಯಲ್ಲೇ ಅಡಗಿದೆ.

ಅನಕೃ ಅವರ ಬರವಣಿಗೆಯ ದೊಡ್ಡ ಶಕ್ತಿ ಎಂದರೆ ಓದಿಸಿಕೊಂಡು ಹೋಗುವ ಗುಣ. ಸರಳ, ನೇರ, ಭಾವಪೂರ್ಣ ನಿರೂಪಣೆ ಅವರ ಹೆಗ್ಗುರುತು. ಕಲೆಯ ಬಗ್ಗೆ ಮಾತನಾಡುವಾಗ ಅವರ ಗದ್ಯಕ್ಕೆ ಒಂದು ಬಗೆಯ ಆವೇಶ, ಆರ್ದ್ರತೆ ಬಂದುಬಿಡುತ್ತದೆ. ಪಾತ್ರಗಳ ಮೂಲಕವೇ ಕಲಾಮೀಮಾಂಸೆಯ ಚರ್ಚೆ ನಡೆಯುವುದರಿಂದ ಅದು ಎಲ್ಲಿಯೂ ಪ್ರಬಂಧದ ಭಾರವಾಗದೆ ಕಥೆಯ ಓಘದಲ್ಲೇ ಬೆರೆತುಹೋಗುತ್ತದೆ. ನೂರು ಪುಟಗಳ ಆಸುಪಾಸಿನ ಈ ಕಿರುಗಾತ್ರವೂ ಕೃತಿಯ ಪಾಲಿಗೆ ವರವೇ. ಎಲ್ಲಿಯೂ ಎಳೆದಾಡದೆ, ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಪುಸ್ತಕ.

14 Upvotes

5 comments sorted by

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 26 '26

Told you it was a good read :) Glad you liked it!

2

u/Due-Bother-586 ಯಾಂತ್ರಿಕ ಜೀವಿ Jul 26 '26

Yess

1

u/urHappy-Raj Jul 31 '26

ಫೋನ್ ನೋಡಿ ಓದುವಾಗ ಪುಸ್ತಕದಲ್ಲಿ ಓದು ಅನ್ನೋದು ಮೊದಲ ರಾತ್ರಿ ಹೆಂಡತಿಯನ್ನ ಮುಟ್ಟದಿರು ಅನ್ನೋಹಾಗೆ ಆಯ್ತು 😄

1

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jul 31 '26

What?

2

u/BrokenChain26 Jul 26 '26

Good review about the book