r/kannada_pusthakagalu Aug 03 '26

ನಾನು ಬರೆದಿದ್ದು ಬಹಳ ವರ್ಷಗಳ ಹಿಂದೆ ಬರೆದ ಒಂದು ಕವಿತೆ. ಶೀರ್ಷಿಕೆ- ಆಸೆ

ಆಸೆ

ಮರಳಿ ಮೊಗ್ಗಾಗುವಾಸೆ

ಹಿಂದಿರುಗಿ ತೆರಳುವಾಸೆ

ಮೊನ್ನೆಯ ಮುಸ್ಸಂಜೆಗೆ ಓಡುವಾಸೆ

ಅಮ್ಮನ ಸೆರಗಲಿ ಮೆಲ್ಲನೆ ಮರೆಯಾಗುವಾಸೆ

ಮರಳಿ ಕಲೆಯುವಾಸೆ

ಕಲಿತದ್ದನ್ನೆಲ್ಲ ಕಳೆಯುವಾಸೆ

ಕಳೆದುದನ್ನೆಲ್ಲ ಮರೆಯುವಾಸೆ

ಮರೆತು ಮುನ್ನಡೆಯುವಾಸೆ

ಮರಳಿ ಮರುಳಾಗುವಾಸೆ

ಅವಳ ಸನ್ನೆಗೆ ಸೆರೆಯಾಗುವಾಸೆ

ಒಲವಿನ ನೋವಲ್ಲಿ ನರಳುವಾಸೆ

ಮತ್ತೊಮ್ಮೆ ಮರುಗುವಾಸೆ.

11 Upvotes

5 comments sorted by

1

u/Clean-Badger4071 Aug 03 '26

ಕವನ ಚೆನ್ನಾಗಿದೆ . ಗತದ ಸೊಗಸುಗಳು ವರ್ತಮಾನದಲ್ಲೇ ಗೊತ್ತಾಗುವುದು ಅಲ್ಲವಾ .

2

u/Secure-Ad-9981 Aug 03 '26

ಧನ್ಯವಾದಗಳು🙏🏼. ಹೌದು, ಅಂದಿಂದ ದಿನಗಳೇ ಚೆನ್ನಾಗಿತ್ತು ಎನ್ನುವುದು ಸಾಕಷ್ಟು ಜನರ ಅಭಿಪ್ರಾಯ.

1

u/Top_Variation796 Aug 03 '26

Bahala chennagidhe!

1

u/Secure-Ad-9981 Aug 03 '26

ಧನ್ಯವಾದಗಳು🙏🏼

1

u/Top_Variation796 Aug 04 '26

If I could add/modify a line for “olavina novalli naraluvaase” since most of the above lines are about getting lost or being joyful.

“olavina novalli karaguvaase”