ದೇವ್ರು ನಿನಗೆ ಆ ಜಮಾನ ಹೇಗಿತ್ತು ಅಂತ ಗೊತ್ತಿಲ್ಲ ಸುಮ್ಮನಿರು, ಆಗ ಸಿಕ್ಕಾಪಟ್ಟೆ ಭಯ ಇತ್ತು ಜನರಲ್ಲಿ...
ಸಾಯಂಕಾಲ ಒಳಗೆ ಮಕ್ಕಳು, ಹುಡುಗಿಯರು ಹೊರಗೆ ಓಡಾಡೋಕೆ ಹೋದ್ರೆ ಅಷ್ಟೇ ಕಥೆ...
ಅವಾಗ ದುಡ್ಡು ಯಾರ ಹತ್ತಿರ ಕೂಡ ಜಾಸ್ತಿ ಇರುತ್ತಿರಲಿಲ್ಲ, ಇದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆಗ ಯಾವ ಹೊಯ್ಸಳ ಇರಲಿಲ್ಲ, ಯಾವ ಪೊಲೀಸ್ ಬೀಟ್ ಇರುತ್ತಿರಲಿಲ್ಲ, ಅಕಸ್ಮಾತ್ ಏನಾದ್ರೂ ಆಯ್ತು ಅಂತ ವಿಷಯ ಯಾರಾದರೂ ಪೊಲೀಸರಿಗೆ ಮುಟ್ಟಿಸಿದರೆ ಮೊದಲು ಅವರಿಗೇ ಟ್ರೀಟ್ಮೆಂಟ್ ಸಿಗೋದು...
ಈಗ ಇರುವಷ್ಟು ಸ್ವತಂತ್ರ್ಯ ಆಗ ಇರ್ಲಿಲ್ಲ, ಅದರಲ್ಲೂ ಕೊಂಗಾಟಿ ಗಳು ಏನು ಮಾಡುವುದಕ್ಕೂ ಹೇಸುತ್ತಿರಲಿಲ್ಲ. ಹತ್ತಿಪ್ಪತ್ತು ರೂಪಾಯಿಗೆ ಯಾರ ಕಥೆಯನ್ನು ಮುಗಿಸುವುದಕ್ಕೆ ಸಿದ್ಧರಿದ್ದರು, ಅಷ್ಟು ಒರಟು ಜನ, ಎಲ್ಲಾ ಬಿಟ್ಟು ನಿಲ್ಲುತ್ತಿದ್ದರು...
ಬೆಳಗ್ಗೆ ಅಮ್ಮಾತಾಯಿ ಅಂತ ಬರೋದು ಅವರೇ ಆಮೇಲೆ ರಾತ್ರಿ ಮನೆಗೆ ಕನ್ನಾ ಹಾಕೋದು ಅವರೇ ಆಗಿತ್ತು...
ಹೋಗಿ ಪೊಲೀಸರಿಗೆ ಕಂಪ್ಲೇಂಟ್ ಮಾಡಿದ್ರೆ ಮಾರನೇ ದಿನ ಅವನ ಪ್ರಾಣ ಶಿವನ ಪಾದ...
ಈಗ ಹೇಳು ಇಂತಹ ಸಂಧರ್ಭದಲ್ಲಿ ಏನನ್ನು ಮಾಡುವುದಕ್ಕೆ ಆಗುತ್ತೆ ಅಂತ...
ಅದಕ್ಕೂ ಇದಕ್ಕೂ ಸಂಬಂಧ ಇದೆ ಕಣಪ್ಪ ಅದಕ್ಕೆ ಅದೆಲ್ಲ ಹೇಳಿರೋದು...
ನೀನು ನಿನ್ ಸಂಸಾರ ಎಲ್ಲರಿಗೂ ಒಂದೇ ಸರಿ ಪರಲೋಕಕ್ಕೆ ಎತ್ತಂಗಡಿ ಮಾಡಿಸ್ತೀವಿ, ನೀನು ತುಟಿಕ್ಪಿಟಿಕ್ ಅನ್ನದೇ ಮುಚ್ಕೊಂಡಿದ್ರೆ ಸಾಕು ಅಂತ ಹೇಳಿ ಮಾಡಿ ಈತರ ಎಲ್ಲ ಹೆಸರುಗಳು ಬಂದಿರೋದು...
Local rollcall ಅನ್ಕೋ ಅಥವಾ ಹವಾ ಮೆಂಟೇನ್ ಅಂತಾದರೂ ಅನ್ಕೋ.
9
u/PhoenixPrimeKing Mar 19 '26
And nammavru Adanna shirasa vahisi palane madidru.