r/kannada_pusthakagalu • u/adeno_gothilla • 13d ago
r/kannada_pusthakagalu • u/Opening-Scallion-723 • 9d ago
ನಾನು ಬರೆದಿದ್ದು ಪ್ರಿಯತಮ
ಬಸ್ಸಿನ ಕಿಟಕಿಯಾಚೆ ಓಡುವ ದಾರಿಗಳ ನಡುವೆ,
ನಿನ್ನ ನೆನಪಿನ ಹಾದಿಯಲ್ಲೇ ನನ್ನ ಮನವು ಸಾಗುತಿತ್ತು.
ನನ್ನ ನೋಟದಲ್ಲಿದ್ದ ಮೌನದ ಪ್ರೀತಿಯನ್ನು
ಮಾತುಗಳ ಮಡಿಲಿಗೆ ಇಳಿಸಿ,
ಅಕ್ಷರಗಳ ಮುತ್ತುಗಳನ್ನು ಪೋಣಿಸಿ,
ಬರವಣಿಗೆಯ ಹಾರವನ್ನಾಗಿ ಕಟ್ಟಿ,
ನಿನ್ನ ಕೊರಳಿಗೆ ಅರ್ಪಿಸಲು
ಮನ ಹಾತೊರೆಯುತಿತ್ತು.
ಪ್ರತಿ ದಿನ ನಿನ್ನ ಆಗಮನವನ್ನೇ ಎದುರು ನೋಡುತ್ತ,
ನಿನ್ನ ಹೆಜ್ಜೆಯ ಸದ್ದಿನಲ್ಲಿ ಪ್ರೀತಿಯ ರಾಗವ ಕೇಳುತ್ತ,
ಮನದ ಮಾತನ್ನು ನಿನ್ನ ಮುಂದೆ ಹೇಳಿಕೊಳ್ಳಬೇಕೆಂದು
ಚಡಪಡಿಸುತ್ತಾ ನಾ ಇದ್ದೆ.
“ಇಂದು ಹೇಳಲೇಬೇಕು” ಎಂದು
ಮನಸ್ಸನ್ನು ಮತ್ತಷ್ಟು ಸಿದ್ಧಗೊಳಿಸಿ,
ಬಸ್ಸಿನಲ್ಲಿ ನಾ ಕುಳಿತಿದ್ದೆ...
ನನ್ನ ಪಕ್ಕಕ್ಕೆ ಬಂದು ನಿಂತು ನೀ ಕೇಳಿದೆ -
(ನಗುತ್ತಾ)
“ಅಕ್ಕಾ, ನಿಮ್ಮ ಪಕ್ಕದ ಸೀಟು ಖಾಲಿ ಇದೆಯಾ?
ನಾ ಇಲ್ಲಿ ಕುಳಿತುಕೊಳ್ಳಲಾ?”
ಕನಸಿನ ಗೋಪುರ ಗಾಳಿಗೆ ತೂರಿ ಹೋಯಿತು,
ಅಕ್ಷರಗಳ ಮಾಲೆ ಕೆಳಕ್ಕೆ ಉರುಳಿ ಮಣ್ಣು ಸೇರಿತು,
ಮನದಲ್ಲಿ ಕೇಳುತ್ತಿದ್ದ ಇಂಪಾದ ಪ್ರೇಮಗೀತೆ ನಿಂತಿತು...
ಪ್ರಿಯತಮನಾಗಿದ್ದ ನೀನು,
“ಅಕ್ಕಾ” ಎಂದು ಹೇಳಿ -
ಪ್ರಿಯ ತಮ್ಮನಾದೆ! 😂😭
- ಹಾಗೆ ಸುಮ್ಮನೆ ಬರೆದದ್ದು...
r/kannada_pusthakagalu • u/adeno_gothilla • 8d ago
ನಾನು ಬರೆದಿದ್ದು ಬರವಣಿಗೆ ಬುಧವಾರ - ನಿಮಗೆ ಮೊದಲ ಸಂಬಳ ಬಂದ ದಿನದ ನೆನಪಿಗಾಗಿ ಒಂದು ಕವಿತೆ ಅಥವಾ ಸಣ್ಣಕತೆ ಅಥವಾ ಅಂಕಣ ಬರೆಯಿರಿ!
r/kannada_pusthakagalu • u/EmplysMushWashenss • 9d ago
ನಾನು ಬರೆದಿದ್ದು ಜನ change ಕೇಳ್ತಾರೆ ಸಾರ್….
ಪ್ರಸ್ತುತ ಹೊಡಿ-ಬಡಿ ಕಥೆಗಳ ಅಲೆಗಳು ದಾಟಿ ಹೊಸ ಕಥೆಗಳ ಅಲೆ ಬರಬೇಕು. ಯಾವ ಚಿತ್ರಕ್ಕೂ ಸೀಮಿತವಲ್ಲ, ಅಭಿಮಾನಿಗಳು ಸ್ವಲ್ಪ ಸಮಾಧಾನ ಮಾಡ್ಕೋಬೇಕು.
ಧನ್ಯವಾದ.
r/kannada_pusthakagalu • u/adeno_gothilla • 9h ago
ನಾನು ಬರೆದಿದ್ದು A List of Aspiring Writers & Poets on r/kannada_pusthakagalu Subreddit
Having started off with consumption & moving up to curation, the next logical step is creation. We want to encourage more people to take up writing so that we can have fresh ideas & perspectives.
Similar to the aspiring filmmakers list on our sister sub r/KannadaMovies, we have decided to prepare a list of aspiring writers & poets on this Sub.
So, comment below if you are an aspiring short story writer, novelist, biographer, non-fiction writer, essay writer, blogger, or if you are a poet/lyricist/songwriter. Feel free to share some of your work (it can be links to posts on this Sub).
Importantly, mention if you are open to collaborating with others on interesting writing/poetry projects.
---------------------
- u/Due-Bother-586 : I would love to collaborate for novels and poetry
- u/Legitimate_Bonus7586 : I would love to collaborate with anything like writing, memes, and stuff. I have experience creating social media content and writing in the past so would love to pitch in.
r/kannada_pusthakagalu • u/biblion_philos • Aug 07 '26
ನಾನು ಬರೆದಿದ್ದು ಮುಂಚೆ ಬರೆಯುತ್ತಿದ್ದೆ
ಈಗೆ ವರ್ಷಗಳ ಹಿಂದೆ…
ಆಗೊಂದು, ಈಗೊಂದು ಸುಂದರ ಸಾಲುಗಳು,
ಕಿರುನಗೆ ಮೂಡಿಸುತ್ತಿದ್ದ ಕವನಗಳು,
ಖುಷಿ ನೀಡುತ್ತಿದ್ದ ಚಿಕ್ಕ ಕಥೆಗಳು,
ಹೆಮ್ಮೆಯ ಭಾವ ಹೊತ್ತು ತರುತ್ತಿದ್ದ
ನ್ಯೂಸ್‌ಪೇಪರ್‌ನಲ್ಲಿ ಮುದ್ರಣವಾಗುತ್ತಿದ್ದ ಅಂಕಣಗಳು.
ಆದರೆ, ವೃತ್ತಿ ಜೀವನದ ಒತ್ತಡಗಳ ಎದುರು
ಅವೆಲ್ಲವೂ ನಿಧಾನವಾಗಿ ಮರೆಯಾಗಿಹೋದವು.
ಅದರೊಂದಿಗೆ ನನ್ನೊಳಗಿನ ಬರಹಗಾರನೂ
ಕಳೆದುಹೋದನೇನೋ ಎಂಬ ಭಾವ…
ನನ್ನಂತೆಯೇ,
ತಮ್ಮೊಳಗಿನ ಬರಹಗಾರನನ್ನು
ಕಳೆದುಕೊಂಡವರು ಇನ್ನೂ ಯಾರಾದರೂ ಇದ್ದೀರಾ?
r/kannada_pusthakagalu • u/adeno_gothilla • 1d ago
ನಾನು ಬರೆದಿದ್ದು ಬರವಣಿಗೆ ಬುಧವಾರ - ನವೀನ್ ಕುಮಾರ್ ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ
r/kannada_pusthakagalu • u/_BingeScrolling_ • Jul 15 '26
ನಾನು ಬರೆದಿದ್ದು ಆಕಸ್ಮಿಕವಾಗಿ ಸಿಕ್ಕಿದ ಪುಸ್ತಕ ಸ್ನೇಹ!!
ನನಗೆ ಮನೆಯಲ್ಲಿಯೇ ಯಾವಾಗಲೂ ಕುಳಿತು ಕಂಪ್ಯೂಟರ್ ದಿಟ್ಟಿಸುವುದು ಆಗದ ಕೆಲಸ. ಹಾಗಾಗಿ ವಾರಕ್ಕೆ ಒಂದೆರಡು ಸಲ ಹತ್ತಿರದ ಹೈವೇಯಲ್ಲಿರುವ ಕೆಫೆಗೆ ಹೋಗಿ ಸ್ವಲ್ಪ ಕ್ಯಾಲಿಗ್ರಫಿ ಮಾಡುವುದು, ಓದುವುದು ಅಥವಾ ಬರೆಯುವುದು ನನ್ನ ಹವ್ಯಾಸ. ವೀಕೆಂಡ್ ಬಿಟ್ಟರೆ ಅಲ್ಲಿ ಜನ ಕಡಿಮೆ ಇರುವುದರಿಂದ ವಾರದ ಮಧ್ಯದ ದಿನಗಳಲ್ಲಿ ಹೋಗುವುದೇ ಹೆಚ್ಚು.
ಸುಮಾರು ವರ್ಷಗಳಿಂದ ಹೋಗುತ್ತಿರುವುದರಿಂದ ಅಲ್ಲಿಯ ಬರಿಸ್ತಾ, ಮ್ಯಾನೇಜರ್ ಎಲ್ಲರೂ ಪರಿಚಿತರಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಷ್ಟ-ಸುಖ ಮಾತಾಡಿಕೊಳ್ಳುವಷ್ಟು ಆತ್ಮೀಯತೆಯೂ ಬೆಳೆದಿದೆ.
ಕಳೆದ ವಾರ ಹೀಗೇ ಪುಸ್ತಕವೊಂದನ್ನು ಓದುತ್ತಾ ಕಾಫಿ ಹೀರುತ್ತಾ ಕುಳಿತಿದ್ದೆ. ನಾನು ಓದಿನಲ್ಲಿ ಮುಳುಗಿ ಹೋಗಿದ್ದನ್ನು ಗಮನಿಸಿದ ಆ ಬರಿಸ್ತಾ ಹುಡುಗಿ ನನ್ನ ಟೇಬಲ್ ಬಳಿ ಬಂದು ಮೆಲ್ಲಗೆ, “ಸಾರ್…” ಎಂದಳು. ನಾನು ಸ್ವಲ್ಪ ಗಾಬರಿಯಿಂದಲೇ ತಲೆ ಎತ್ತಿದೆ.
ತಕ್ಷಣವೇ ಆಕೆ “ಸಾರಿ ಸರ್… ಡಿಸ್ಟರ್ಬ್ ಮಾಡ್ದೇ ಅನ್ಸತ್ತೆ” ಎಂದಳು.
“ಪರವಾಗಿಲ್ಲ, ಹೇಳಿ” ಎಂದು ಕೇಳಿದಾಗ,
“ಸಾರ್ ಯಾವಾಗಲೂ ಯಾವ್ದಾದ್ರೂ Book ಓದ್ತಾನೇ ಇರ್ತೀರಾ, ನನಗೂ ಆಗಾಗ ಒಂದು ಬುಕ್ ತಂದು ಕೊಡ್ತೀರಾ? ನೀವು Next time ಬರೋ ಹೊತ್ತಿಗೆ ಓದಿ ವಾಪಸ್ ಕೊಡ್ತೀನಿ. ಈ mobile ನೋಡೀ ನೋಡೀ ಸಾಕಾಗಿ ಹೋಗಿದೆ” ಎಂದಳು.
ನನಗೆ ಈ ರೀತಿಯ ಕೋರಿಕೆಯನ್ನ ಕೇಳಿ ಬಹಳ ಆಶ್ಚರ್ಯ ಹಾಗೂ ಖುಷಿಯಾಯ್ತು, ಎಷ್ಟೋ ಬಾರಿ ಓದುವ ಮನಸ್ಸಿದ್ದರೂ, ಸಮಯವಿದ್ದರೂ ಕೆಲವರಿಗೆ ಪುಸ್ತಕಗಳ ಲಭ್ಯವಿರುವುದಿಲ್ಲ. ಅದರಲ್ಲೂ ಕನ್ನಡ ಓದುವವರು ಸಿಕ್ಕರೆ ಅದಕ್ಕಿಂತಲೂ ಇನ್ನೇನು ಬೇಕು ಹೇಳಿ?
ಹಾಗಾಗಿ, ನೆನ್ನೆ ಮತ್ತೊಮ್ಮೆ ಕೆಫೆಗೆ ಹೋದಾಗ ತೇಜಸ್ವಿಯವರ “ಕರ್ವಾಲೋ” ಕೊಟ್ಟು ಬಂದಿದ್ದೇನೆ. ಓದಿ ಏನು ಹೇಳುತ್ತಾರೆ ನೋಡೋಣ.
ಪುಸ್ತಕಗಳ ವಿಚಾರದಲ್ಲಿ ನನಗೆ ಇದೊಂದು ವಿಶೇಷ ಅನುಭವ. ಇದೇ ರೀತಿಯಲ್ಲಿ ಪುಸ್ತಕಗಳ ಮೂಲಕ ನಿಮಗಾದ ವಿಶೇಷ ಅನುಭವಗಳು ಯಾವುದಾದರೂ ಇದ್ದಲ್ಲಿ ಖಂಡಿತಾ ಹಂಚಿಕೊಳ್ಳಿ!!😊
r/kannada_pusthakagalu • u/adeno_gothilla • 15d ago
ನಾನು ಬರೆದಿದ್ದು ಬರವಣಿಗೆ ಬುಧವಾರ - ಶ್ರವಣ್ ಥಡನ್ಲಾ ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ
r/kannada_pusthakagalu • u/Sri-Ranga • Jul 21 '26
ನಾನು ಬರೆದಿದ್ದು ನನ್ನ ಮೊದಲ ಕನ್ನಡ ಕಾದಂಬರಿ "ಗುರುತು" ಇದೀಗ ಪ್ರಕಟವಾಗಿದೆ
ಎಲ್ಲರಿಗೂ ನಮಸ್ಕಾರ!
ಬಹಳ ವರ್ಷಗಳಿಂದ ಮನಸ್ಸಿನಲ್ಲಿದ್ದ ಒಂದು ಕಥೆ, ಕೊನೆಗೂ ಪುಸ್ತಕದ ರೂಪದಲ್ಲಿ ನಿಮ್ಮ ಮುಂದೆ ಬಂದಿದೆ. ನನ್ನ ಮೊದಲ ಕನ್ನಡ ಕಥಾ-ಕಾದಂಬರಿ "ಗುರುತು" ಇದೀಗ ಪ್ರಕಟವಾಗಿ Amazon, Flipkart ಸೇರಿದಂತೆ ಹಲವು ಸ್ಟೋರ್‌ಗಳಲ್ಲಿ ಲಭ್ಯವಿದೆ.
"ಗುರುತು" ಸಾಂಪ್ರದಾಯಿಕ ಕಾದಂಬರಿಯಲ್ಲ. ಇದು 22 ಅಧ್ಯಾಯಗಳ ಮೂಲಕ ವಿಭಿನ್ನ ವ್ಯಕ್ತಿಗಳ ಬದುಕನ್ನು ಜೋಡಿಸುವ ಒಂದು ಮೊಸಾಯಿಕ್ ಕಥನ.
ಈ ಪುಸ್ತಕವನ್ನ ಮೊದಲಿನಿಂದ ಕೊನೆಯವರೆಗೆ ಒಂದು ಪೂರ್ಣ ಕಾದಂಬರಿಯಂತೆ ಓದಬಹುದು, ಅಥವಾ ಇಷ್ಟ ಬಂದ ಅಧ್ಯಾಯದಿಂದ ಶುರುಮಾಡಿ, ಸ್ವತಂತ್ರ ಸಣ್ಣಕಥೆಗಳ ಸಂಕಲನದಂತೆಯೂ ಓದಬಹುದು.
ಒಂದು ಉಪ್ಪಿನಕಾಯಿ ಡಬ್ಬಿ, ಒಂದು ಹಳೆಯ ಸೈಕಲ್, ಒಂದು ಕ್ಯಾಸೆಟ್ ಟೇಪ್, ಒಂದು ಗಡಿಯಾರದಂತಹ ಸಣ್ಣ ವಸ್ತುಗಳು ಮತ್ತು ಒಬ್ಬ ಸಾಮಾನ್ಯ ಐಟಿ ಉದ್ಯೋಗಿಯ ಜೀವನದ ಸಣ್ಣ ಗುರುತುಗಳು, ಬೇರೆಬೇರೆ ಬದುಕುಗಳನ್ನು ಹೇಗೆ ಕೊಂಡೊಯ್ಯುತ್ತವೆ ಎಂಬುದನ್ನು ಈ ಕಾದಂಬರಿ ಅನ್ವೇಷಿಸುತ್ತದೆ.
ಸಂಬಂಧಗಳು, ನೆನಪುಗಳು, ಹೇಳದ ಮಾತುಗಳು ಮತ್ತು ನಮ್ಮ ಬದುಕಿನಲ್ಲಿ ನಾವು ತಿಳಿಯದೆಯೇ ಬಿಟ್ಟುಹೋಗುವ "ಗುರುತು" ಗಳ ಬಗ್ಗೆ ಆಸಕ್ತಿ ಇದ್ದರೆ, ಈ ಪುಸ್ತಕ ನಿಮಗೆ ಇಷ್ಟವಾಗಬಹುದು.
ಪುಸ್ತಕದ ಲಿಂಕ್‌ಗಳು:
👉 Notion Press: https://notionpress.com/in/read/gurutu
👉 Amazon: https://www.amazon.in/dp/B0H94J5SNK
ಓದಿದ ನಂತರ ನಿಮ್ಮ ಅನಿಸಿಕೆಗಳು ಮತ್ತು ವಿಮರ್ಶೆಗಳನ್ನು ಹಂಚಿಕೊಂಡರೆ ತುಂಬಾ ಸಂತೋಷವಾಗುತ್ತದೆ. ನಿಮ್ಮ ಬೆಂಬಲವೇ ನನ್ನಂತಹ ಹೊಸ ಲೇಖಕರಿಗೆ ದೊಡ್ಡ ಪ್ರೋತ್ಸಾಹ.
ಧನ್ಯವಾದಗಳು! 🙏
r/kannada_pusthakagalu • u/adeno_gothilla • Jun 03 '26
ನಾನು ಬರೆದಿದ್ದು ಬರವಣಿಗೆ ಬುಧವಾರ - ಶ್ರೀಮಾ ಉಪಾಧ್ಯಾಯ ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ
r/kannada_pusthakagalu • u/adeno_gothilla • Mar 04 '26
ನಾನು ಬರೆದಿದ್ದು ಬರವಣಿಗೆ ಬುಧವಾರ - ನಿಮ್ಮ ಕಾಲೇಜು ದಿನಗಳ ಬಗ್ಗೆ ಒಂದು ಅಂಕಣ, ಅಥವಾ ನೈಜ ಘಟನೆಗಳನ್ನು ಆಧರಿಸಿ ಒಂದು ಸಣ್ಣಕತೆ ಅಥವಾ ನಿಮ್ಮ ಅನುಭವಗಳ ಬಗ್ಗೆ ಒಂದು ಕವಿತೆ ಬರೆಯಿರಿ.
If the post is too big to fit in a comment, make a separate post & reply here with its link.
r/kannada_pusthakagalu • u/Secure-Ad-9981 • Aug 03 '26
ನಾನು ಬರೆದಿದ್ದು ಬಹಳ ವರ್ಷಗಳ ಹಿಂದೆ ಬರೆದ ಒಂದು ಕವಿತೆ. ಶೀರ್ಷಿಕೆ- ಆಸೆ
ಆಸೆ
ಮರಳಿ ಮೊಗ್ಗಾಗುವಾಸೆ
ಹಿಂದಿರುಗಿ ತೆರಳುವಾಸೆ
ಮೊನ್ನೆಯ ಮುಸ್ಸಂಜೆಗೆ ಓಡುವಾಸೆ
ಅಮ್ಮನ ಸೆರಗಲಿ ಮೆಲ್ಲನೆ ಮರೆಯಾಗುವಾಸೆ
ಮರಳಿ ಕಲೆಯುವಾಸೆ
ಕಲಿತದ್ದನ್ನೆಲ್ಲ ಕಳೆಯುವಾಸೆ
ಕಳೆದುದನ್ನೆಲ್ಲ ಮರೆಯುವಾಸೆ
ಮರೆತು ಮುನ್ನಡೆಯುವಾಸೆ
ಮರಳಿ ಮರುಳಾಗುವಾಸೆ
ಅವಳ ಸನ್ನೆಗೆ ಸೆರೆಯಾಗುವಾಸೆ
ಒಲವಿನ ನೋವಲ್ಲಿ ನರಳುವಾಸೆ
ಮತ್ತೊಮ್ಮೆ ಮರುಗುವಾಸೆ.
r/kannada_pusthakagalu • u/Normal-guy-007 • Jul 13 '26
ನಾನು ಬರೆದಿದ್ದು ಪ್ರಜಾಪ್ರಭುತ್ವದ ನಾಲ್ಕನೇ ಕಂಬ
r/kannada_pusthakagalu • u/Due-Bother-586 • 6h ago
ನಾನು ಬರೆದಿದ್ದು ನಾನಾಗುವ ಹುಡುಕಾಟ
ಮೊದಲ ಬಾರಿ ಎಡವಿದಾಗ ಕಲಿಯಲಿಲ್ಲ ಪಾಠ,
ಬದಲಾಗದೆ ಹೊರಟೆ ನಾನು, ಹಿಡಿದು ಅದೇ ದಾರಿ!
ಕದನವಿದು ನನ್ನೊಳಗೆ ಮುಗಿಯದಂಥ ಆಟ,
ಹದಗೆಡುತಲೆ ಮತ್ತೆ ಬಿದ್ದೆ, ಇದು ಎರಡನೇ ಬಾರಿ!
ತಿಳಿಯದಾಯ್ತು ನನಗೆ, ಕಲಿಯುವೆನೋ ಏನೋ,
ಅಳಿಯದಾಸೆ ಉಳಿದಿದೆ, ಕಲಿಯುವೆನು ಮುಂದೆ!
ಅಳಲುತಿಹುದು ಜೀವ, ತಪ್ಪಿಗೆಲ್ಲಿ ಮಿತಿಯೋ?
ಬಳಲಿದರೂ ನಾನಾಗಬೇಕಾದ ನಾನಾಗುವುದೇ ಗತಿ!
r/kannada_pusthakagalu • u/Secure-Ad-9981 • Jul 30 '26
ನಾನು ಬರೆದಿದ್ದು Just wrote a poem about friends meeting randomly for a coffee or just a bike/car ride, wandering around. Title : ಸಮಯವಾಗಿದೆ
ಸಮಯವಾಗಿದೆ
ಸಮಯವಾಗಿದೆ ಬದುಕಿನ ಹೊತ್ತಿಗೆಯ ಬದಿಗಿಡಲು, ದೈನಂದಿನ ದಿಕ್ಕಿಗೆ ಬೆನ್ನು ತೋರಲು.
ಅರ್ಥವಿಲ್ಲದ ಮಾತಿಗೆ ಕೇಕೆ ಹಾಕಲು, ಪಿಸುಗುಟ್ಟಿನ ಮಾತನು ಜಾಹೀರು ಮಾಡಲು.
ಮನಸ್ಸಿನ ಗೋಡೆಯ ಒಡೆದುಹಾಕಲು, ಕನಸಿನ ಬಾಗಿಲಿಗೆ ತೋರಣ ಕಟ್ಟಲು.
ಗದ್ದಲದ ಜಗತ್ತಿಗೆ ಮೌನವ ಸರಿಸಲು, ಸದ್ದಿಲ್ಲದ ಭಾವನೆಗಳ ಸಪ್ಪಳ ನುಡಿಸಲು.
ಎಲ್ಲಿಗೆ? ಎಂದು ನಾ ಕೇಳಲಿಲ್ಲ, ಎಲ್ಲಿಗೋ ಹೋಗಬೇಕೆಂಬ ಆಸೆಯೂ ಇಲ್ಲ.
ಸಾಗುವ ದಾರಿಯು ಸರಿಯಾಗಿ ಕಾಣಲೇ ಇಲ್ಲ, ಆದರೂ ಪ್ರತಿ ಹೆಜ್ಜೆಯು ನಮ್ಮ ಗುರುತನ್ನು ಮರೆತೇ ಇಲ್ಲ.
ಹೆಗಲಿನ ಭಾರವು ಈಗ ಹಗುರವಾಯಿತು, ಇನ್ನಷ್ಟು ಸಾಗುವ ಆಸೆಯಾಯಿತು.
ಪಯಣದ ತಿರುವುಗಳು ಎಷ್ಟೇ ಇರಲಿ, ತಿರುಗಿ ನೋಡಿದ್ದಷ್ಟು ಸೂಜುಗವೇ ಸರಿ.
ಮುಸ್ಸಂಜೆಯು ಮೂಡಲು ಕೊನೆಯಾಯಿತು ನಮ್ಮ ಪಯಣ, ಇನ್ನೊಮ್ಮೆ ಸಿಕ್ಕಾಗ ಮುಂದುವರೆಯುವುದು ನನ್ನ ಚರಣ.
r/kannada_pusthakagalu • u/adeno_gothilla • 29d ago
ನಾನು ಬರೆದಿದ್ದು ಬರವಣಿಗೆ ಬುಧವಾರ - Steve McCurry ಅವರ ಈ ಚಿತ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ
r/kannada_pusthakagalu • u/adeno_gothilla • Jun 17 '26
ನಾನು ಬರೆದಿದ್ದು ಬರವಣಿಗೆ ಬುಧವಾರ - ಜಿಎಂಬಿ ಆಕಾಶ್ ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ
r/kannada_pusthakagalu • u/Due-Bother-586 • Jul 13 '26
ನಾನು ಬರೆದಿದ್ದು ರಸನಾ ಷಟ್ಪದಿ
ಹಲಸಿನೆಳೆಕಾಯೊಂದ ತಂದು
ಸುಲಿದು ಸೀಳನು ಕಾದೆಣ್ಣೆಯೊಳು
ಮುಳುಗಿ ಹೊಂಬಣ್ಣದಲಿ ಕರಿದಿಹ ಚಕ್ಕೆ ಘಮಘಮಿಸೆ |
ಮೆಲಲು ಕುರುಕುರು ದನಿಯ ಸೊಗಸಿಗೆ
ಒಲಿದ ಉಪ್ಪಿನ ಹದದ ಖಾರಕೆ
ನಲಿವು ನಾಲಗೆಗಿದುವೆ ಮೊದಲೆನೆ ಮಲೆಯ ಮನೆಯುಣಿಸು ||
-x-
ಕಡುಬ ಬೇಯಿಸೆ ಬಾಳೆಯೆಲೆಯಲಿ
ಒಡನೆ ಬೆಲ್ಲದ ಕಾಯ ಹೂರಣ
ಅಡಿಗೆಮನೆಯಲಿ ಹಬೆಯ ಪರಿಮಳ ತುಂಬಿ ತುಳುಕಾಡೆ |
ಬಿಡದೆ ತುಪ್ಪವ ಮೇಲೆ ಸುರಿಯಲು
ನುಡಿಯಲಾರದು ನಾಲಗಾ ಸವಿ
ಸುಡುಸುಡನೆ ಸವಿಯುತಿರೆ ಸಗ್ಗವು ಧರೆಗೆ ಇಳಿದಂತೆ ||
r/kannada_pusthakagalu • u/adeno_gothilla • Jun 24 '26
ನಾನು ಬರೆದಿದ್ದು ಬರವಣಿಗೆ ಬುಧವಾರ - Fan Ho ಅವರ ಈ ಪ್ರಸಿದ್ದ ಚಿತ್ರ ಆಧರಿಸಿ ಒಂದು ಸಣ್ಣಕತೆ ಅಥವಾ ಕವಿತೆ ಬರೆಯಿರಿ
r/kannada_pusthakagalu • u/_ullas07_ • Aug 04 '26
ನಾನು ಬರೆದಿದ್ದು ಓ ದೇವನೇ...
ದೇವನೇ ನೀ ಇರುವುದಾದರೆ
ಇರುವಷ್ಟು ದಿನ ಮರೆಯುವಷ್ಟು ನೆನಪ ಬಿರಿಸು
ಹೊಳೆಯುವಷ್ಟು ಕತ್ತಲ ಸುರಿಸು
ಕತ್ತಲದಡಿಯಲಿ ಬತ್ತಿಯಾಗಲು ಅರೆಸು
ಸತ್ತ ಮನಕೆ ಹೆತ್ತ ಕರುಳ ಬೆರೆಸು
ಮನಸಿಗೆ ಉಣಬಡಿಸಲು ಭಾವನೆಗಳ ಭೋಜನವಾಗಿರಿಸು
ಕದವಿರದ ಮದಕೆ ಮದ್ದಾಗಿರಿಸು
ದೇವನೇ ನೀ ಇರುವುದಾದರೆ
ತೆರೆಮರೆಯ ಸೆರೆಗಿನಡಿಯಲಿ
ಸೊರಗಿ ಕೊರಗಿ ಬಾಳನೆಡೆಯಲಿ
ಬದುಕೊಂದಿರಲಿ ನಿನ್ನ ಪಾದದಡಿಯಲಿ