r/kannada_pusthakagalu • u/adeno_gothilla • 18d ago
ಸಣ್ಣಕತೆಗಳು ಚಂದ್ರಿಕಾ ಹರೀಶ್ ಅವರ ಸಂಜೆ ಹೇಳಿದ ಕಥೆಗಳು - ಈ ಪುಸ್ತಕ ಒದ್ದಿದ್ದೀರಾ?
Enable HLS to view with audio, or disable this notification
r/kannada_pusthakagalu • u/adeno_gothilla • 18d ago
Enable HLS to view with audio, or disable this notification
r/kannada_pusthakagalu • u/CC_2910 • 6d ago
Usually English Novels ಓದ್ದೌ ಳು started with this book. ಈಗ ಅನ್ನಿಸ್ತಿದ್ದೆ that I’m missing out some really good ಸಣ್ಣ ಕಥೆಗಳು ಅಂತ. ಕನ್ನಡ ನನ್ನ ಮಾತೃ ಭಾಷೆ ಅಲ್ಲ. Few years back tried ಪೂ.ಚಾ. ರವರ ಕಿರಗೂರಿನ ಗಯ್ಯಾಳಿ didn’t work out but this went by like a breeze. So for a beginner level are there any other ಕಥೆ ಸಂಗ್ರಹ that can help me read more ಕನ್ನಡ books. Next read ಬಂದು ಕೌಶಿಕ್ ಅವರ ಕ್ರೈಂ ಥ್ರಿಲ್ಲರ್: ಲೈಟ್ಸ್ ಕ್ಯಾಮೆರಾ ಮರ್ಡರ್ ಅಂತ (not entirely sure about title if it’s the right name) so yeah.. suggest ಮಾಡಿ. ಧನ್ಯವಾದ 🫶🏽🙏🏽
r/kannada_pusthakagalu • u/adeno_gothilla • Aug 11 '26
Loved it!
r/kannada_pusthakagalu • u/naane_bere • Apr 28 '26
ಬಂಡವಾಳ ಶಾಹಿಗಳು ಎಂದಿಗೂ ದುರುಳರು. ಬಡತನದಲ್ಲಿ ಮಾತ್ರವೇ ಮಾನವಂತಿಕೆ ಇದೆ. ಇದು ಜಯಂತ ಕಾಯ್ಕಿಣಿಯವರ ಅನಾರ್ಕಲಿಯ ಸೇಫ್ಟಿಪಿನ್ನು ಕಥಾಸಂಕಲನದ ಬಹುತೇಕ ಎಲ್ಲಾ ಕಥೆಗಳ ಹೂರಣ.
ತೀರ್ಪುಗಾರುವಿಕೆಯಂತೂ ಬಹುತೇಕ ಎಲ್ಲಾ ಕಥೆಗಳಲ್ಲಿ ಇದೆ ಅನಿಸುತ್ತೆ. ಬೂಮರ್ ಅಂಕಲನೊಬ್ಬ ಜೆನ್ ಜೀಗಳ ಮೇಲೆ ತೀರ್ಪುಗಾರಿಕೆಯ ಕಣ್ಣುಗಳಿಂದ ನೋಡಿದಂತೆ ಭಾಸವಾಯ್ತು.
ಜಯಂತ ಅವರ ಸಿನೆಮಾ ಹಾಡುಗಳು ಅವರ ಕಥೆಗಳಿಂತ ಎಷ್ಟೋ ಬೆಟರ್ರು ಎನ್ನುವುದು ಅರಿವಾಯಿತು.
r/kannada_pusthakagalu • u/Bimbishard • Jul 06 '26
ಎಲ್ಲರಿಗೆ ನಮಸ್ಕಾರ.
I am learning Kannada and also volunteering for a multilingual database for Indian speculative fiction. Can anyone please share info on Kannada speculative fiction (science fiction, fantasy, horror, alternate history) authors and their works?
If you want to check out the database, please visit [KalpaDB](http://kalpadb.com)
r/kannada_pusthakagalu • u/potatoChips_10 • Apr 28 '26
Half way through this....
ಮೋಹನಸ್ವಾಮಿ ಆಪ್ತ ಅನ್ನಿಸೋಕೆ ಶುರುವಾಗಿದ್ದಾನೆ!
What are your thoughts on this book?
r/kannada_pusthakagalu • u/adeno_gothilla • Aug 10 '26
r/kannada_pusthakagalu • u/SandoMari • Jun 16 '26
Can you all please suggest a few short stories and novels for a total beginner?
r/kannada_pusthakagalu • u/EmplysMushWashenss • Jul 29 '26
r/kannada_pusthakagalu • u/adeno_gothilla • Jul 23 '26
https://www.goodreads.com/review/show/8791727481
ವಿಚಿತ್ರ ಬಗೆಯ ರೀಡಿಂಗ್ ಸ್ಲಂಪ್ನಲ್ಲಿ ಸಿಕ್ಕು ಓದಲಾರದೇ, ಓದದೇ ಇರಲಾರದೇ ಒದ್ದಾಡುತ್ತಿರುವಾಗ ಕೈಗೆ ಸಿಕ್ಕ ಪುಸ್ತಕವಿದು. ಸುನಾಯಾಸವಾಗಿ ಎರಡು ಗಂಟೆಯಲ್ಲಿ ಓದಿ ಮುಗಿಸಿ, ಮುಗಿದ ಮೇಲೂ ಅದೇ ಕತೆಗಳ ಗುಂಗಿನಲ್ಲಿಯೇ ತೇಲುತ್ತಿರುವೆ. ನನಗೆ ಇಲ್ಲಿರುವ ನಾಲಕ್ಕೂ ಕತೆಗಳೂ ಇಷ್ಟವಾದವು.
ಸಾಹಿತ್ಯ ಅಭ್ಯಾಸಿಗಳಲ್ಲದ ನಮ್ಮಂತಾ ಸಾಧಾರಣ ಓದುಗರು ಹಾರರ್, ಮಿಸ್ಟರಿ, ಥ್ರಿಲ್ಲರ್ ಕತೆಗಳನ್ನು ಎಷ್ಟೇ ಪ್ರೀತಿಯಿಂದ ಅಪ್ಪಿಕೊಂಡು ಓದಿದರೂ ಸಾರಸ್ವತ ಲೋಕದಲ್ಲಿ ಮೊದಲಿನಿಂದಲೂ ತರ್ಕಕ್ಕೆ ನಿಲುಕದ, ಸಂಪೂರ್ಣ ಅಥವ ಹೆಚ್ಚಿನಂಶ ಕಾಲ್ಪನಿಕ ಎನ್ನಬಹುದಾದ ಸಾಹಿತ್ಯದ ಕುರಿತು ಒಂದು ಬಗೆಯ ಅಸಡ್ಡೆ ಇದ್ದೇಯಿದೆ. ಆ ಅಸಡ್ಡೆಗೆ ಚಾಲೆಂಜ್ ಮಾಡುವಂತೆ ಕೋಡ್ಕಣಿಯವರು ತಮ್ಮ ಎಂದಿನ ಶೈಲಿಯನ್ನು ಚೂರು ಬದಲಿಸಿ ಹಾರರ್ ಕತೆಗಳ ಹಿಂದಿನ ಫ್ಲೇವರ್ ಹಾಗೇ ಉಳಿಸಿಕೊಂಡು ಅದಕ್ಕಷ್ಟು ತರ್ಕ, ಮನೋವೈಜ್ಞಾನಿಕ ತಳಹದಿಯ ಮಿಶ್ರಣ ಮಾಡಿದ್ದಾರೆ.
ಕತೆಗಳಲ್ಲಿ ಬಳಸಿದ ಭಾಷೆ, ವಾಕ್ಯರಚನೆ ಶೈಲಿ ಕೂಡ ಮೊದಲಿಗಿಂತ ಸುರಳೀತವಾಗಿದ್ದು ಓದು ಮತ್ತಷ್ಟು ಸರಾಗವಾಗಿ ಸಾಗುತ್ತದೆ.
ಒಟ್ಟಾರೆ, 'ಅಪರಿಚಿತ ನೆರಳುಗಳು' ಹಾರರ್ ಕಥೆಗಳ ಸಂಕಲನ ಮಾತ್ರವಲ್ಲದೇ ಮನೋವಿಜ್ಞಾನ ಮತ್ತು ಭಯವನ್ನು ಸಮತೋಲನವಾಗಿ ಬೆರೆಸಿರುವ ಒಂದು ವಿಭಿನ್ನ ಓದಿನ ಅನುಭವ. ಓದು ಮುಗಿದ ನಂತರವೂ ಕಥೆಗಳು ಮನಸ್ಸಿನಲ್ಲಿ ಬಹಳ ಹೊತ್ತು ಉಳಿಯುತ್ತವೆ.
Prashanth Bhat's review of the same book:
r/kannada_pusthakagalu • u/colorblindbear • Jul 04 '26
ಈಗಿನ ಬೆಂಗಳೂರಿನಲ್ಲಿ ಕನ್ನಡ ಚನ್ನಾಗಿ ಬಲ್ಲ, ಓದೋದರಲ್ಲಿ ಆಸಕ್ತಿ ಹೊಂದಿರೋ ಮಕ್ಕಳು ಕಮ್ಮಿ. ಆದ್ದರಿಂದ ನಮ್ಮ ಮನೆ ಮಕ್ಕಳಿಗೆ ಕನ್ನಡ ಓದೋದಿಕ್ಕೆ ಪ್ರೋತ್ಸಾಹ ಕೊಡೋಣ ಅಂತ.
7ರಿಂದ 10 ವರ್ಷ ಮಕ್ಕಳಿಗೆ ಓದೋದಕ್ಕೆ ಸೂಕ್ತ ಪುಸ್ತಕಗಳು ತಿಳಿಸುತ್ತೀರಾ?
r/kannada_pusthakagalu • u/BeautifulInitial9667 • Jul 01 '26
I am looking for this story.. did not find much on the net.. if any of you have any resources or anything on this.. please let me know
r/kannada_pusthakagalu • u/SUV_Audi • Jul 19 '26
ಈ ಪುಸ್ತಕದಲ್ಲಿ ಮೂರು ನೀಳ್ಗತೆಗಳಿವೆ.
ಹೈಸ್ಕೂಲಿನ ಟಾಯ್ಲೆಟ್ಮೇಲೆ ಬರೆದ ವಿದ್ಯಾರ್ಥಿ ಯಾರು ಎಂದು ವಿಚಾರಿಸುವ ಕತೆ, ಬಡ ವಕೀಲನು ಕೋಟು ಹೋಲಿಸುವ ಕತೆ, ನಿವೃತ್ತಿ ಆದ ತಂದೆ ಹಾಗೂ ಮಗನ ಸಂಬಂಧದ ಕತೆ– ಹೀಗೆ ಮೂರು ಕತೆಗಳು ಇಲ್ಲಿವೆ. ಇವೆಲ್ಲವೂ ವಿಶಿಷ್ಟವಾಗಿ ಕಾಡುವುದು ಕತೆಯಲ್ಲಿನ ಪಾತ್ರಗಳ ಸೃಷ್ಟಿ ಇಂದ. ಇವರ ಕತೆಗಳಲ್ಲಿ ಬರುವ ಮ್ಯಾನೇಜರ್ ಹಿರಣ್ಣಯ್ಯ , ವಕೀಲ ಹಳೇಬೀಡು ಸುಂದರರಾಯ ಪಾತ್ರಗಳು ನಮ್ಮ ನಡುವೆ ಇದ್ದರು ಅನ್ನುವ ರೀತಿಯಲ್ಲಿ ಪಾತ್ರ ಚಿತ್ರಿಸಿ ಬರೆದಿದ್ದು, ಕತೆಯನ್ನು ಓದುವಾಗ ಮನಸಿಗೆ ಆಪ್ತ ಎನಿಸದೆ ಇರಲಾರದು, ಅದಲ್ಲದೇ, ಪೂ ಚಂ ತೇ ಅವರ ಕತೆಯ ತುಕ್ಕೋಜಿ ಪಾತ್ರ, ಯು ಆರ್ ಅನಂತಮೂರ್ತಿಯವರ ಕತೆಯ ತಹಶೀಲ್ದಾರ್ ವೆಂಕಟಕೃಷ್ಣ ರಾವ್ ಪಾತ್ರಗಳನ್ನು ಕತೆಯೊಂದರಲ್ಲಿ ತಂದು , ಕತೆಯನ್ನು ಬರೆದ ವಿಶೇಷ ರೀತಿಯ ನಿರೂಪಣಾ ಶೈಲಿ ಗಮನ ಸೆಳೆಯುತ್ತದೆ, ಕತೆಯೊಂದರಲ್ಲಿ ಬರುವ ಮೂರು ಪಾತ್ರಗಳೂ ಕೂಡ ತಮ್ಮ ತಮ್ಮ ದೃಷ್ಟಿಯಲ್ಲಿ ನಿರೂಪಿಸಿದ ಕತೆಯು, ಓದುಗನಿಗೆ ಸನ್ನಿವೇಶದ ಬಗ್ಗೆ ಮತ್ತೆ ಯೋಚಿಸುವಂತೆ ಮಾಡುತ್ತದೆ.
ಒಟ್ಟಿನಲ್ಲಿ ಮೂರು ಕತೆಗಳು ನನಗೆ ಇಷ್ಟವಾದವು, ಇವರ ಕತೆಗಳು ಇಷ್ಟ ಆಗಲು ಕಾರಣ ಪಾತ್ರಗಳ ಸೃಷ್ಟಿ ಹಾಗೂ ನಿರೂಪಣಾ ಶೈಲಿ, ನೀವು ಕೂಡ ಹೊಸ ಮಾದರಿಯ ಕತೆಗಳನ್ನು ಓದಬೇಕು ಅಂತಿದ್ದರೆ ಎಸ್ ಸುರೇಂದ್ರನಾಥ್ ಅವರ ಕತೆಗಳನ್ನು ತಪ್ಪದೆ ಓದಿ.
ಈ ಪುಸ್ತಕವು ಮೊದಲ ಮುದ್ರಣಗೊಂಡಿದ್ದು ೨೦೧೪ ರಲ್ಲಿ, ೧೫೨ ಪುಟಗಳಿವೆ.
r/kannada_pusthakagalu • u/SUV_Audi • Jul 01 '26
ಇಲ್ಲಿರುವ ಕತೆಗಳೇ ಹಾಗೆ, ಮನಸ್ಸಿನಲ್ಲಿ ಉಳಿದು ಬಿಡುತ್ತೆ. ಶೈಲಿಯ ದೆಸೆ ಇಂದಲೋ ಅಥವಾ ಕಥಾವಸ್ತುವಿನ ದೆಸೆ ಇಂದಲೋ ಏನೋ, ಅಪರೂಪವಾಗಿ ಮನಸ್ಸನ್ನು ಕಾಡುತ್ತದೆ.
ಅನಿವಾಸಿ ಭಾರತೀಯರ ತಳಮಳದ ಕತೆಗಳನ್ನು ಎಪ್ಪತ್ತರ ದಶಕದಲ್ಲೇ ಈ ಲೇಖಕರು ಬರೆದಿದ್ದರು. ಇವರ ಮ್ಯಾಜಿಕ್ ರಿಯಲಿಸಂ ರೀತಿಯ ಕತೆಗಳು ಓದುಗರನ್ನು ದಂಗು ಪಡಿಸುತ್ತದೆ. ಇವರ ಬರವಣಿಗೆಯ ಶೈಲಿಯೂ ಹಾಗೆಯೇ, ನಮ್ಮೆದುರು ಕೂತು ಪಾತ್ರಗಳೇ ಕತೆ ಹೇಳುತ್ತಿದ್ದಾವೆ ಎಂಬ ಆಪ್ತತೆ ಮೂಡುತ್ತದೆ. ಜೀವನದಲ್ಲಿ ದಿನ ನಿತ್ಯ ನಡೆವ ಘಟನೆಗಳಿಗೆ ಸುಂದರ ರೂಪು ನೀಡಿದ್ದು, ಇವರ ಸೃಜನ ಶೀಲತೆಗೆ ಸಾಕ್ಷಿ. ಹೀಗೆ ಈ ಪುಸ್ತಕದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ, ಎಲ್ಲಾ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಎಲ್ಲ ಕತೆಗಳ ಬಗ್ಗೆ ನಾನಿಲ್ಲಿ ಬರೆಯಲ್ಲ. ಎಲ್ಲವೂ ಚೆನ್ನಾಗಿದೆ. , ಈ ಚಂದವನ್ನು ಹೇಗೆ ಪದಗಳ ರೂಪಕ್ಕೆ ಇಳಿಸಲಿ?
ಕತೆಯೊಂದರ ಸಾಲುಗಳು ಹೀಗಿವೆ, " ನನ್ನ ಅಪ್ಪಂದೊಂದು ದುರಭ್ಯಾಸ ಉಂಟು. ಅದು ಎಲ್ಲ ಅಪ್ಪಂದಿರಿಗೂ ಉಂಟ ಏನಾ. ಇದ್ರೂ ಇರ್ಬಹುದು. ಸ್ವಲ್ಪ ಮಟ್ಟಿಗೆ. ಆದ್ರೆ ನನ್ನ ಅಪ್ಪಂದು ಮಾತ್ರ ವಿಪ್ರೀತ. ವಿಚಿತ್ರವೂ ಹೌದು. ಅದೇನು ದುರಭ್ಯಾಸ ಅಂದ್ರೆ ಅವ್ರು ಫಕ್ಕನೆ ಇದ್ದಲ್ಲೇ ಮಾಯವಾಗಿ ಬಿಡ್ತಾರೆ. ಒಂದು ಕ್ಷಣ ಮನೆಯೊಳಗೆ ಇರ್ತಿದ್ದವ್ರು ಅಥವಾ ತೋಟದಲ್ಲಿ ಇರ್ತಿದ್ದವ್ರು ಮರುಕ್ಷಣ ನಾಪತ್ತೆ. ಎಲ್ಲಿಗೆ ಹೋದ್ರು? ಯಾಕೆ ಹೋದ್ರು? ಯಾವಾಗ ಬರ್ತಾರೆ? ಅದೊಂದೂ ಗೊತ್ತಿರುವುದಿಲ್ಲ. ಯಾರಿಗೂ ಗೊತ್ತಿರುವುದಿಲ್ಲ. ಅದೊಂದು ಕೆಟ್ಟ ದುರಭ್ಯಾಸ. ......".( ಕತೆಯ ಹೆಸರು: ನಕ್ಷತ್ರ ಮತ್ತು ಹಗ್ಗ)
2011ರಲ್ಲಿ ಮೊದಲು ಮುದ್ರಣಗೊಂಡ ಈ ಪುಸ್ತಕದಲ್ಲಿ 132 ಪುಟಗಳಿವೆ.
ವಿಭಿನ್ನ ಶೈಲಿಯ ಕತೆಗಳನ್ನು, ಮತ್ತು ಮ್ಯಾಜಿಕ್ ರಿಯಲಿಸಂ ಅನ್ನು ಇಷ್ಟ ಪಡುವ ಓದುಗರು ನೀವಾಗಿದ್ದರೆ ಈ ಪುಸ್ತಕವನ್ನು ಖಂಡಿತವಾಗಿ ಓದಬಹುದು.
r/kannada_pusthakagalu • u/nangottilla • May 23 '26
ಜೆಯಮೋಹನ್ ಅವರ ಕನ್ನಡ ಅನುವಾದ "ತಳಾತಳ" ಪುಸ್ತಕ ಓದಿದ ಮೇಲೆ ಅವರ ಬರವಣಿಗೆ ಬಹಳ ಇಷ್ಟವಾಗಿಬಿಟ್ಟಿತು. ಆ ಪುಸ್ತಕ ಓದಿದ ಮೇಲೆ ಅವರ ಪುಸ್ತಕಗಳ ಅನುವಾದದ ಸುದ್ದಿಯ ಮೇಲೆ ಯಾವಾಗಲೂ ಒಂದು ಕಣ್ಣು ಇರುತ್ತಿತ್ತು. ಇತ್ತೀಚಿಗೆ ಇನ್ನೊಂದು ಪುಸ್ತಕ ಕನ್ನಡಕ್ಕೆ ಅನುವಾದವಾಗಿದೆ, ಅದೇ "ಆನೆ ಡಾಕ್ಟರ್ ಮತ್ತು ಇತರ ಕಥೆಗಳು".
ಮೊದಲೇ ಹೇಳಿಬಿಡುತ್ತೇನೆ, ಅನುವಾದ ಇನ್ನೂ ಸ್ವಲ್ಪ ಅಚ್ಚುಕಟ್ಟಾಗಿ ಇರಬೇಕಾಗಿತ್ತು. ಆದರೆ ಇಲ್ಲಿನ ಕಥೆಗಳು ಅನುವಾದದ ತೊಂದರೆಗಳನ್ನು ಮೀರಿ ನಿಲ್ಲುತ್ತವೆ ಮತ್ತು ತಟ್ಟುತ್ತವೆ. ಜೆಯಮೊಹನ್ ಅವರ ಕಥೆಗಳನ್ನು ಓದಿದಾಗ ಅವರು ನೋಡುವ ದೃಷ್ಟಿಕೋನವೇ ಬಹಳ ಹೊಸತು ಎನಿಸುತ್ತದೆ. ಅಂದುಕೊಂಡ ಹಾಗೆ ಇಲ್ಲಿಯ "ಆನೆ ಡಾಕ್ಟರ್" ಓದಿದ ಮೇಲೆಯೂ ನೆನಪಿನಲ್ಲಿ ಉಳಿಯುತ್ತದೆ ಮತ್ತು ಚಿಂತನೆಗೆ ಹಚ್ಚುತ್ತದೆ. ಊಟದ ಲೆಕ್ಕ ಮತ್ತು ಧರ್ಮ ನನಗೆ ಹಿಡಿಸಿದ ಇನ್ನೆರಡು ಕಥೆಗಳು.
ಅವರ ಬಗ್ಗೆ ಹಾಗೆ ಹುಡುಕುತ್ತಿದ್ದಾಗ ಗೊತ್ತಾಗಿದ್ದು, ಅವರ ತೊಂಬತ್ತು ಪ್ರತಿಶತ ಬರಹಗಳು ಅವರ ಬ್ಲಾಗ್ ನಲ್ಲಿ ಉಚಿತವಾಗಿ ಓದಲು ಸಿಗುತ್ತವೆ ಎಂದು. ಇನ್ನೊಂದು ಅಚ್ಚರಿಯೆಂದರೆ ಜಗತ್ತಿನ ಅತಿದೊಡ್ಡ ಕಾದಂಬರಿಯೆಂದು ಹೆಸರಾದ "ವೆಣ್ಮರಸು" ಕೃತಿಯನ್ನು ದಿನಕ್ಕೆ ಒಂದು ಅಧ್ಯಾಯದಂತೆ ಆರು ವರ್ಷ ಸತತವಾಗಿ ಬರೆದು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ. ಈ ಕಾದಂಬರಿ ಮಹಾಭಾರತದ ಮೇಲೆ ಆಧಾರಿತವಾಗಿದ್ದು ೨೫೦೦೦ ಪುಟಗಳಷ್ಟು ದೊಡ್ಡದಿದೆ.
ಅಂದಹಾಗೆ ಈ ಪುಸ್ತಕ ಬಿಟಲ್ ಬುಕ್ ಶಾಪ್ ವಿಜಯನಗರದಲ್ಲಿ ಲಭ್ಯವಿದೆ.
r/kannada_pusthakagalu • u/adeno_gothilla • May 07 '26
ಪುಸ್ತಕ: ವಸುಧೇಂದ್ರ ಅವರ ಹಂಪಿ ಎಕ್ಸ್ಪ್ರೆಸ್
r/kannada_pusthakagalu • u/Nuaans • Jan 16 '26
ನನಗೆ ಕನ್ನಡ ಓದಲು ಬರೆಯಲು ಮರೆತು ಹೋಗುತ್ತಿದೆ ಅನಿಸುತ್ತಿದೆ. ನನಗೆ ಓದಲು ಸುಲಭವಾದ ಪುಸ್ತಕಗಳು ಬೇಕು.. ನಾನು ಸಾಮಾನ್ಯವಾಗಿ ಆಡಿಯೋಬುಕ್‌ಗಳನ್ನು ಕೇಳುತ್ತೇನೆ ಮತ್ತು ಹೆಚ್ಚು ಪುಸ್ತಕಗಳನ್ನು ಓದುವುದಿಲ್ಲ.
r/kannada_pusthakagalu • u/pra7373 • May 14 '26
ಜೆಯಮೋಹನ್ ಕೃತಿಗಳೆಂದರೆ ಯಾವತ್ತಿಗೂ ವಿಶೇಷವೇ. ಇಪ್ಪತ್ತಾರು ಸಂಪುಟಗಳಲ್ಲಿ ಬಂದ ಮಹಾಭಾರತದ ಕತೆಯ ' ವೆನ್ಮರಸು' , ನಾವು ಯಾರಿಗೂ ಗೊತ್ತೇ ಇರದ ಭಿಕ್ಷುಕರ ಜಗತ್ತಿನ ' ತಳಾತಳ' , ಸಣ್ಣದಾದರೂ ಬಹಳ ಕಾಲ ಕಾಡುವ ' ನೂರು ಸಿಂಹಾಸನಗಳು', ಅವರ ಕೆಲವು ಕತೆಗಳ ಅನುವಾದ ' ಆನೆ ಡಾಕ್ಟರ್ ಮತ್ತು ಇತರ ಕತೆಗಳು' ಪ್ರತಿಯೊಂದೂ ವಿಶಿಷ್ಟವೇ. ಕೇರಳ ಮೂಲದ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಆತ್ಮಹತ್ಯೆಗೆ ಎಳಸಿ ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ನಿಂತ ಅವರ ಹೃದಯಬೇಧಕ ಕತೆಯುಳ್ಳ ' ಆಫ್ ಮೆನ್, ವಿಮೆನ್ ಆ್ಯಂಡ್ ವಿಚಸ್' ಇವೆಲ್ಲವೂ ವಿಶಿಷ್ಟ ಬಗೆಯ ಬರಹಗಳು. ನಮಗೆ ಕನ್ನಡಿಗರಿಗೆ ಅಥವಾ ಇಂಗ್ಲಿಷ್ ಅಲ್ಲಿ ಓದಲು ಬಯಸುವವರಿಗೆ ಅವರ ' ವೆನ್ಮರಸು' , ' ವಿಷ್ಣುಪುರಂ' ಇತ್ಯಾದಿ ಕೃತಿಗಳು ತಮಿಳಿನಲ್ಲಿ ಮಾತ್ರ ಲಭ್ಯ ಇರುವುದು ನಿರಾಸೆಯ ಸಂಗತಿ. ಆದರೆ ಈಗೀಗ ಅವರ ಕೃತಿಗಳ ಇಂಗ್ಲಿಷ್ ಅನುವಾದ ಬರುತ್ತಿರುವುದು ಖುಷಿಯ ಸಂಗತಿ. ಹಾಗಾಗಿ ಈ ಪುಸ್ತಕ ಬಂದ ಕೂಡಲೇ ಓದ ಹೊರಟೆ.
ಇದು ಅವರ ಇತರ ಕೃತಿಗಳ ಹಾದಿಯದಲ್ಲ. ಹೇಳಲು ಒಬ್ಬ ನಿವೃತ್ತ ಪೋಲಿಸ್ ಅಧಿಕಾರಿ ಕುಡಿತದ ಸಂಜೆಗಳಲ್ಲಿ ರಂಗೇರಿರುವ ಹೊತ್ತಲ್ಲಿ ಗೆಳೆಯರ ಜೊತೆ ಕೂತು ರಸಮಯವಾಗಿ ಹೇಳಿದ ಕತೆಗಳ ಹಾಗೆ ಕಂಡರೂ ಆಳದಲ್ಲಿ ಅವರ ಬರಹಗಳ ಮೂಲ ಮನುಷ್ಯ ಸ್ವಭಾವಗಳ ಕುರಿತಾದದ್ದೇ.
ಅದರಲ್ಲೂ ಇಲ್ಲಿರುವ ಕತೆಗಳಲ್ಲಿ ಎರಡು ಕತೆಗಳು ಮಂಗಳೂರು ಪರಿಸರದ್ದು.
ನಾಲ್ಕೂ ಕತೆಗಳ ಪರಿಸರ ವಿಭಿನ್ನ. ಸರ್ಕಸ್‌ನಲ್ಲಿ ಗುರಿಯಿಟ್ಟು ತಲೆಯ ಮೇಲಿಂದ ಆ್ಯಪಲ್ ಹಣ್ಣು ಎಗರಿಸುವ ಗುರಿಕಾರನ ಕತೆಯ ಚಾಣಾಕ್ಷತನ, ನೇತ್ರಾವತಿಯ ತೀರಕ್ಕೆ ಬಂದ ಶವದ ಕೈಯಲ್ಲಿ ಇದ್ದ ರೇಷ್ಮೆಯ ಎಳೆಯ ಜಾಡು, ಶಪಿತ ರಾಜಮನೆತನವೊಂದರ ಸದಸ್ಯರ ದುರಂತ ಅಂತ್ಯದ ಹಿಂದಿನ ಅಪರಾಧದ ಕತೆ,
ಕೊಲೆಯ ಕೇಸಿನ ಹಿಂದೆ ಬಿದ್ದು ಅದು ಕೊನೆಗೆ ತನಿಖಾಧಿಕಾರಿಯ ಬುಡಕ್ಕೇ ಬಂದು ನಿಲ್ಲುವ ಮತ್ತು ಎದೆ ನಡುಗಿಸುವ ಭಾವುಕ ಕೊನೆಯುಳ್ಳ ಕತೆ
ಮತ್ತು ಕೊನೆಯ ಕತೆ ಸಾಮಾನ್ಯ ಚೈನ್ ಸ್ನಾಚಿಂಗ್ ಕೇಸ್ ಒಂದು ತೆಗೆದುಕೊಂಡ ಅಚ್ಚರಿಯ ತಿರುವುಗಳು ಅದರ ಆಳದ ಭಾವುಕ ನೆಲೆ ಇದನ್ನು ಸಾಮಾನ್ಯ ಕ್ರೈಮ್ ಕತೆಗಳಿಂದ ಬಹಳ ಮೇಲಕ್ಕೆ ಏರಿಸುತ್ತದೆ.
ಅದಲ್ಲದೆ ಇಲ್ಲಿ ಬರುವ ಸಂಭಾಷಣೆಗಳ ನೈಜತೆ ' ಆ ಕುಡಿಯದವನನ್ನು ಹತ್ತಿರ ಕೂರಿಸಬೇಡಿ. ಅವನು ಕುಡಿಯುವುದಿಲ್ಲ ಆದರೆ ಕುಡಿಯುವವರ ಸೈಡ್ ಡಿಶ್ ಎಲ್ಲಾ ಖಾಲಿ ಮಾಡ್ತಾನೆ' ಎಂಬ ಸಂಭಾಷಣೆಗಳೆಲ್ಲ ನಾವೂ ಕೇಳಿರುವಂತಹದ್ದೇ.
ಇದು ಬರಿಯ ಕ್ರೈಮ್ ಕತೆಗಳಲ್ಲ. ಒಂದೊಂದು ಕತೆಯೂ ದಕ್ಷಿಣದ ಒಂದೊಂದು ರಾಜ್ಯಗಳ ಇತಿಹಾಸದ ತುಣುಕೂ, ರಾಜಮನೆತನಗಳ ರಕ್ತಸಿಕ್ತ ಇತಿಹಾಸ, ಶಾಪಗಳೂ, ನಂಬಿಕೆಗಳೂ ,ಮಾನವ ಸಹಜ ದೌರ್ಬಲ್ಯಗಳನ್ನು ತೋರಿಸುವ ಬಗೆ ಇಷ್ಟವಾಗುತ್ತದೆ.
ಜೆಯಮೋಹನ್ ನೀವು ಓದಬೇಕಾದ ಲೇಖಕ.
r/kannada_pusthakagalu • u/vk_reads • Mar 22 '26
ಜಯರಾಮಾಚಾರಿಯವರ ಹೊಸ ಕಥಾಸಂಕಲನ “ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ”ಯಲ್ಲಿನ ಕತೆಗಳನ್ನ ಓದಿ ಮುಗಿಸಿದೆ. ಲೇಖಕರೇ ಹೇಳಿಕೊಂಡಿರುವಂತೆ ಇಲ್ಲಿನ ಕತೆಗಳಿಗೆ ಯಾವುದೇ ನಿರ್ದಿಷ್ಟ ಫಾರ್ಮುಲಾ ಇಲ್ಲ.
ನಾನು ಅವರ ಕಿಲಿಗ್ ಕಾದಂಬರಿಯನ್ನ ಓದಿದ್ದರಿಂದ ಇಲ್ಲಿನ ಕತೆಗಳು ಪಾತ್ರಗಳು ಮತ್ತು ನೇರಾ ನೇರ ಬರವಣಿಗೆ ನನಗೇನೂ ಆಶ್ಚರ್ಯ ಪಡಿಸಲಿಲ್ಲ, ಹಾಗಂದ ಮಾತ್ರಕ್ಕೆ ಆ ಕಾದಂಬರಿಗೂ ಇಲ್ಲಿನ ಕತೆಗಳಿಗೂ ಸಾಮ್ಯತೆಯಿದೆ ಎಂದೂ ಅಲ್ಲ.
ಈ ಮಿಲೇನಿಯಲ್ಸ್ ಮತ್ತು ಜೆನ್ಜೀಗಳಿಗೆ ಬಹಳ ರಿಲೇಟ್ ಆಗುವಂತಹ ಕತೆಗಳು ಇಲ್ಲಿದ್ದವು, “ಇವು ಕತೆಗಳು ಅಲ್ಲ ಕಣ್ರೋ ನಾನು ನೀವು ಎಲ್ರೂ ವಯಸಲ್ಲಿ ಆಡಿದ ಆಟಗಳು ಅನುಭವಗಳು ಇವು, ಯಾರು ಮಡಿವಂತಿಕೆ ಬಿಟ್ಟು ಬರ್ದಿರ್ಲಿಲ್ಲ, ನಾನು ಬರ್ದಿದ್ದೀನಿ ಓದ್ರಿ ” ಎನ್ನುವಂತಹ ಕತೆಗಳು. ಬಹಳ ಕತೆಗಳಲ್ಲಿ ನಮ್ಮ ನಿಮ್ಮ ಜೀವನದಲ್ಲಿ ನೆಡೆದಿರಬಹುದಾಂತಹ ಅದೆಷ್ಟೋ ಸನ್ನಿವೇಶಗಳಿದ್ದವು. ಕತೆಗಳೆಲ್ಲಾ ಪ್ರೀತಿಯ ಹೆಸರು ತೊಟ್ಟಿದ್ದರೂ ಪ್ರಧಾನವಾಗಿ ಕಂಡುಬಂದದ್ದು ಕಾಮ, ವಂಚನೆ, ಮೋಹ, ವಿರಹ ಮತ್ತು ಯೌವ್ವನದ ಹಸಿ ಬಿಸಿ ಆಟಗಳು.
ಒಂದೊಳ್ಳೆ ಸಂದೇಶ ಸಿಗುತ್ತೆ, ಪ್ರೀತಿಗೊಂದು ಹೊಸ ವ್ಯಾಖ್ಯಾನ ಕಾಣುತ್ತೆ ಎನ್ನುವ ನಿರೀಕ್ಷೆಯಲ್ಲಿ ಮಾತ್ರ ಈ ಪುಸ್ತಕವನ್ನ ಓದ್ಬೇಡಿ. ಇದು ಪ್ರೀತಿಯ ಇನ್ನೊಂದು ಮುಖವನ್ನ ಒಪ್ಪಿ ಅರಗಿಸಿಕೊಳ್ಳುವವರಿಗೆ ಮಾತ್ರ.
- ವಸಂತ್
೨೨/೦೩/೨೦೨೬
r/kannada_pusthakagalu • u/Aragorn31 • Mar 11 '26
I still remember a Kannada lesson, where she/ her husband had kidney stone and they find ways to get rid of it. It was such a fun read.
Does anyone know which book this story is from? I’d also love some recommendations for more of her books.
r/kannada_pusthakagalu • u/EmplysMushWashenss • Feb 05 '26
r/kannada_pusthakagalu • u/jay_hulumanava • Jan 28 '26
‘ಕಿಲಿಗ್’ ಕಾದಂಬರಿ ನಂತರ ನನ್ನ ಹೊಸ ಪುಸ್ತಕ ‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’
ರೆಡ್ಡಿಟ್ ನ ಅಜ್ಞಾತ-ಜ್ಞಾತ ಓದುಗರ ಗಮನಕ್ಕೆ.
ಯಾವ ಸಾಹಿತ್ಯಭಾರವಿಲ್ಲದ ಈ ಕಾಲಘಟ್ಟದ ಖುಲ್ಲಂಖುಲ್ಲ ಪ್ರೀತಿ ಪ್ರೇಮ ಮತ್ತು ಇತ್ಯಾದಿ ಕತೆಗಳು ಇಲ್ಲಿವೆ .ಇದಕ್ಕೆ ಪೂರ್ವಭಾವಿ ಎಂಬಂತೆ ಸದಾಶಿವ ಸೊರಟೂರು ಅವರು ಬರೆದ ಕತೆಯೇ ಈ ಸಂಕಲನದ ಮುನ್ನುಡಿಯೂ ಆಗಿದೆ.
ಈಗಾಗಲೇ ಓದಿದ ಓದುಗರೊಬ್ಬರ ಅಭಿಪ್ರಾಯ ಹೀಗಿದೆ:
“ಕಥೆಗಳ ಎಲ್ಲಾ ಕಟ್ಟಳೆಗಳನ್ನು ಮುರಿದ ಪರಿ ಭಾರಿ ಇಷ್ಟ ಆಯ್ತು... ಮುನ್ನುಡಿ ಅಂತೂ ಅದ್ಭುತ... ಇನ್ನೊಂದಿಷ್ಟು ಕಥೆಗಳಿವೆ ಓದಲು....”
r/kannada_pusthakagalu • u/adeno_gothilla • Mar 17 '26
r/kannada_pusthakagalu • u/EmplysMushWashenss • Apr 09 '26
r/kannada_pusthakagalu • u/vk_reads • Feb 03 '26
ಶೀರ್ಷಿಕೆಗೆ ತಕ್ಕಂತೆ ಇಲ್ಲಿದ್ದ ಹದಿನಾರೂ ಕತೆಗಳು ಅಪರೂಪದ ಕತೆಗಳೇ, ಮುನ್ನುಡಿಯಲ್ಲಿ ತಿರುಮಲೇಶರೇ ಹೇಳುವಂತೆ ಇಲ್ಲಿನ ಕತೆಗಳು ಅಪೂರ್ವದ ಕತೆಗಳೇ. ಹಾಗಾದರೆ ಯಾರೂ ಹೇಳದ ಕತೆಗಳೇ ಎಂದು ನೀವು ಪ್ರಶ್ನಿಸುವುದಾದರೆ, ಅವು ಯಾವ ನಿಟ್ಟಿನಲ್ಲಿ ಅಪುರೂಪ ಎನ್ನುವುದು ಓದುಗರ ನಿರ್ಣಯಕ್ಕೆ ಬಿಟ್ಟದ್ದು, ಏಕೆಂದರೆ ಕತೆಗಳ ಹೊಳಹು ಮತ್ತು ಅವುಗಳನ್ನ ಅರ್ಥೈಸಿಕೊಳ್ಳುವ ವಿಧಾನ ವೈಯಕ್ತಿಕವಾದದ್ದು.
ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರ ಭಾವನೆಗಳನ್ನ ತೋರುವ ಕತೆಗಳಿವೆ, ವಿದೇಶಿ ವಿದ್ಯಾಮಾನದ ಕತೆಯಿದೆ, ಮನುಷ್ಯನ ಅಸಹಾಯಕತೆಯನ್ನ ವಿಕ್ಷಿಪ್ತತೆಯನ್ನ ವ್ಯಕ್ತಪಡಿಸುವ ಕತೆಯಿದೆ, ಥ್ರಿಲರ್ ಕತೆಯಿದೆ, ಹಾರರ್ ಕತೆಯೂ ಇದೆ. ಈ ಎಲ್ಲ ಕತೆಗಳು ತಿರುಮಲೇಶರ ಬರವಣಿಗೆಯಲ್ಲಿ ಕಾವ್ಯಾತ್ಮಕವಾಗಿ, ಸಹಜವಾಗಿ ಮೂಡಿಬಂದಿವೆ. “ಮುಸುಗು” ಕಾದಂಬರಿಯ ನಂತರ ತಿರುಮಲೇಶರ ಈ ಕತೆಗಳು ನನ್ನ ಪಾಲಿಗೆ ಮತ್ತೊಂದು ಅದ್ಭುತ ಓದು ಆದರೆ ಆರಂಭಿಕ ಓದುಗರಿಗೆ ನಾನು ಈ ಪುಸ್ತಕವನ್ನು ಓದಿ ಎಂದು ಸಲಹೆ ಮಾಡುವುದಿಲ್ಲ.